ಪತ್ರಿಕೆ ವಿತರಕರ ದಿನಾಚರಣೆ ಸಂಭ್ರಮ

h4-Hwakers
Published on

ಹುಬ್ಬಳ್ಳಿ: ಸೆಪ್ಟೆಂಬರ್ ನಾಲ್ಕು ಪತ್ರಿಕಾ ವಿತರಕರ ದಿನವನ್ನು ನಗರದ ವಿವಿಧೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ದಶಕಗಳಿಂದ ಪತ್ರಿಕೆ ಹಂಚುವುದನ್ನೇ ವೃತ್ತಿ ಮಾಡಿಕೊಂಡಿರುವ ಅನೇಕ ಹಿರಿಯರು, ಇಂದಿನ ಯುವಕರು ಸೇರಿ ಎಂದಿನಂತೆ ಪತ್ರಿಕೆ ಹಂಚಿಕೆಗೆ ಅಣಿಯಾಗುವ ಸ್ಥಳದಲ್ಲಿ ಬೆಳಗಿನ 4- 5 ಗಂಟೆ ಹೊತ್ತಿಗೆ ಸಂಭ್ರಮ ಹಂಚಿಕೊಂಡರು.

ಇಲ್ಲಿಯ ಕೊಪ್ಪಿಕರ ರಸ್ತೆಯಲ್ಲಿ ಬೆಳಗ್ಗೆ 5 ಗಂಟೆಗೆ ಎಲ್ಲ ಪತ್ರಿಕೆ ವಿತರಕರು ಸೇರಿ ಕೇಕ್ ಕತ್ತರಿಸಿ ಪರಸ್ಪರ ಸಿಹಿ ವಿತರಣೆ ಮಾಡಿದರು. ವಿವಿಧ ಪತ್ರಿಕೆಗಳ ಪ್ರತಿನಿಧಿಗಳು, ನಗರದ ವಿವಿಧ ಕಡೆಗಳಲ್ಲಿ ಪತ್ರಿಕೆ ಮನೆಮನೆಗೆ ತಲುಪಿಸುವ ಏಜೆಂಟರು, ಹಂಚಿಕೆದಾರರು ಪರಸ್ಪರ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು.

ಕೊಪ್ಪಿಕರ ರಸ್ತೆಯಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ವೃತ್ತ ಪತ್ರಿಕೆ ವಿತರಕರ ಸಂಘದ ಅಧ್ಯಕ್ಷ ಸಿ.ಎಸ್. ಹಿರೇಮಠ, ಉಪಾಧ್ಯಕ್ಷ ಶಿವಾಜಿ ತಡಸದ, ಕಾರ್ಯದರ್ಶಿ ಗಿರಿಧರ ದಿವಟೆ, ವಿನಯ ಢಗೆ, ಮನೋಹರ ಪರ್ವತಿಕರ, ಅರುಣ ಹಬೀಬ, ರಮೇಶ ಜಿತೂರಿ, ಅರುಣ ತೋಡಕರ, ವಿನಾಯಕ ದಾಡಮೋಡೆ, ಹನಮಂತ ಮೆಣಸಿನಕಾಯಿ, ಗುರುರಾಜ ಅರಕೇರಿ, ಮುಂತಾದವರ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.

ಗೋಕುಲ ರಸ್ತೆಯಲ್ಲಿ ನಡೆದ ಪತ್ರಿಕಾ ವಿತರಕರ ದಿನಾಚರಣೆ ಸಮಾರಂಭದಲ್ಲಿ ಮಹ್ಮದ ಬೇಪಾರಿ, ಪ್ರಸನ್ನ ಭಾಂಡಗೆ, ಮಂಜುನಾಥ ಶಿಂಧೆ, ಆನಂದ ಶಿಂಧೆ, ಶ್ರೀನಿವಾಸ, ಪ್ರವೀಣ, ಆರ್.ಕೆ. ಕುಲಕರ್ಣಿ, ಮೋಹನ, ಶಿವಕುಮಾರ, ಅಶ್ರಫ್, ತಾರಿಖ್, ಅಬ್ದುಲ್ ಸೇರಿ ಅನೇಕರು ಪಾಲ್ಗೊಂಡಿದ್ದರು.

ಹಳೇಹುಬ್ಬಳ್ಳಿಯಲ್ಲಿ ಎಂ.ಜಿ. ಕುಲಕರ್ಣಿ, ಈರಣ್ಣ ಸೂಡಿ, ವೆಂಕಟೇಶ ಏಕಬೋಟೆ, ರಾಘವೇಂದ್ರ ವಿ.ಸಿ., ಓಂಕಾರ ಮೆಣಸಗಿ, ಪ್ರಶಾಂತ ಚಿಲ್ಲಾಳ, ಇತರರು ಸೇರಿ ವಿಜೃಂಭಣೆಯಿಂದ ವಿತರಕರ ದಿನ ಆಚರಿಸಿದರು.

ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಸಂಗಮೇಶ ಅಂಬಿಗೇರ, ಎಸ್.ಎಸ್. ಹಿರೇಮಠ, ಉಮೇಶ, ಸಿದ್ದು ಜಿ, ಮಂಜು ಅಂಬಿಗೇರ, ಮುತ್ತು ಪಾವಟೆ ಹಾಗೂ ಇತರ ಸದಸ್ಯರು ಸೇರಿ ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡರು.

ಕ್ಷೇಮ ನಿಧಿ ಬಳಕೆಯಾಗಲಿ:

ಪತ್ರಿಕೆ ವಿತರಕರ ಕ್ಷೇಮಾಭಿವೃದ್ಧಿಗೆ ಹಿಂದಿನ ಸರ್ಕಾರ ಕ್ಷೇಮ ನಿಧಿ ಸ್ಥಾಪನೆ ಮಾಡಿದೆ. ಆದರೆ, ಅದರ ಬಳಕೆಯಾಗುತ್ತಿಲ್ಲ. ಅದಕ್ಕೆ ಸರಿಯಾದ ಗೈಡ್​ಲೈನ್ಸ್ ಇಲ್ಲ. ಈ ಬಗ್ಗೆ ಬಹಳಷ್ಟು ವಿತರಕರಿಗೆ ಮಾಹಿತಿ ಇಲ್ಲ. ಈ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಬೇಕು. ಸರ್ಕಾರ ವಿತರಕರಿಗೆ ಅದರ ಪ್ರಯೋಜನ ಸಿಗುವಂತೆ ಮಾಡಬೇಕು ಎಂದು ವಿತರಕರ ಸಂಘದವರು ಮನವಿ ಮಾಡಿದ್ದಾರೆ.

ಡಿಜಿಟಲ್ ಪೇಮೆಂಟ್​ಗೆ ಮನವಿ:

ಪತ್ರಿಕೆಗೆ ಚಂದಾದಾರರೇ ಜೀವಾಳ. ಅವರಿಗೆ ಬೆಳಕು ಹರಿಯುವುದರೊಳಗೆ ಪತ್ರಿಕೆ ತಲುಪಿಸುತ್ತೇವೆ. ಚಂದಾ ಹಣ ಸಂಗ್ರಹಣೆ ಕರೊನಾ ಸಂದರ್ಭದಲ್ಲಿ ಸವಾಲಿನ ಕೆಲಸವಾಗಿದೆ. ಹಾಗಾಗಿ ಓದುಗ ಸಹೃದಯರು ಆದಷ್ಟು ಡಿಜಿಟಲ್ ಪೇಮೆಂಟ್​ಗೆ ಆದ್ಯತೆ ನೀಡಿ ಚಂದಾ ಪಾವತಿಸಲು ಅನೇಕ ವಿತರಕರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net