ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ

ydg03
Published on

ಕೊಡೇಕಲ್: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಸಾಮಾನ್ಯಜ್ಞಾನದ ಹೆಚ್ಚಿಸಿಕೊಳ್ಳಲು ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಶಿಕ್ಷಕ ಗುರುರಾಜ ಜೋಶಿ ಹೇಳಿದರು.

ಗಣೇಶ ಉತ್ಸವ ನಿಮಿತ್ತ ಗ್ರಾಮದ ವರ್ತಕರ ಸಂಘದಿAದ ಸೋಮವಾರ ನಿಜಲಿಂಗೇಶ್ವರ ದೇವಸ್ಥಾನದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ರಸಪ್ರಶ್ನೆ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳ ವಿಷಗಳಿಗೆ ಮಾತ್ರ ಸೀಮಿತವಾಗದೆ ಜಗತ್ತಿನಲ್ಲಿ ನಡೆಯುವ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಅಗತ್ಯವಿದೆ ಎಂದರು.

ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ೩೫೦ಕ್ಕೂ ಹೆಚ್ಚು ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಗಣೇಶ ವಿಸರ್ಜನೆ ವೇಳೆ ಬಹುಮಾನ ನೀಡಲಾಗುವುದು ಎಂದರು.

ವರ್ತಕರ ಸಂಘದ ಬಸಣ್ಣ ತುಂಬಗಿ, ಸುರೇಶ ದೇವೂರ, ಖಾನಪ್ಪ ಯಡ್ಡಿ, ಬಸವರಾಜ ಗಿಡನ್ನೂರ, ಮಡಿವಾಳಪ್ಪ ತಮದಡ್ಡಿ, ಬಸಣ್ಣ ಕಕ್ಕೇರಿ, ಫಾಯಣ್ಣ ಬಪ್ಪರಗಿ, ಸಿದ್ರಾಮ ತುಂಬಗಿ, ಶಿವಣ್ಣ ಮದಲಿಂಗನಾಳ, ಅಯ್ಯಪ್ಪ ಪಡಶೆಟ್ಟಿ, ಗೌಡಪ್ಪ, ಚಂದ್ರಶೇಖರ ಹೋಕ್ರಾಣಿ, ಕೋರಿಸಂಗಯ್ಯ ಗಡ್ಡದ, ಭೀಮಣ್ಣ ದೋರಿ, ನಿಂಗಣ್ಣ, ಸಂಗನಬಸಯ್ಯ ಹಿರೇಮಠ, ಭೀಮನಗೌಡ ಬಿರಾದಾರ, ಚಂದ್ರಶೇಖರ ಹೊಸಮಠ, ತಿಮ್ಮಣ್ಣ ಕರಬಸಪ್ಪನವರ, ದೇವು ಕಕ್ಕೇರಿ, ಶಿವರಾಜ ಯಡ್ಡಿ, ಪ್ರಶಾಂತ ಪತ್ತಾರ, ಸುಜಾತಾ ವಂಗಿ, ಪದ್ಮಾವತಿ ಜೈನಾಪುರ, ಚಂದನ ಜೋಶಿ, ಭಾಗ್ಯಶ್ರೀ ಬಿರಾದಾರ ಇತರರಿದ್ದರು.
ಮೌನೇಶ ಹೂಗಾರ ನಿರೂಪಣೆ ಮಾಡಿದರು. ಹಣಮೇಶ ಗಿಡನ್ನೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net