ಪತ್ರಿಕಾ ವಿತರಣೆ ಕಾರ್ಯ ಶ್ರಮದಾಯಕ

03-09-Shiva-1
ರಾಯಚೂರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮವನ್ನು ವಿವಿಯ ಮುಖ್ಯಸ್ಥೆ ಸ್ಮೀತಾ ಅಕ್ಕ ಉದ್ಘಾಟಿಸಿದರು. ಪತ್ರಿಕಾ ವಿತರಕರಾದ ಬಸಪ್ಪ ಗೋರೆಬಾಳ, ಹಾಜಿ, ಇಮ್ತಿಯಾಜ್, ಚಂದ್ರು ಯಕ್ಲಾಸಪುರ, ಮುನಿರೆಡ್ಡಿ, ದತ್ತು ಅಸ್ಕಿಹಾಳ, ವಿಜಯಕುಮಾರ, ವೀರೇಶ ಕರಡಿ, ನಾಗರಾಜ ಮರ್ಚೆಡ, ದೇವರಾಜ ಇದ್ದರು.
Published on

ರಾಯಚೂರು: ಪತ್ರಿಕೆ ವಿತರಕರ ಕಾರ್ಯ ಶ್ರಮದಾಯಕವಾಗಿದ್ದು, ವರದಿಗಾರರು ಮತ್ತು ಮುದ್ರಣಕಾರರ ಕೆಲಸದಷ್ಟೆ ಪ್ರಮುಖವಾಗಿದೆ. ಮಳೆ, ಚಳಿ, ಗಾಳಿ ಎನ್ನದೇ ಮನೆ ಮನೆಗೆ ಪತ್ರಿಕೆ ಮುಟ್ಟಿಸುತ್ತಿರುವ ವಿತರಕರ ಕಾರ್ಯ ಶ್ಲಾಘನೀಯವಾಗಿದೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಸ್ಮೀತಾ ಅಕ್ಕ ಹೇಳಿದರು.
ಸ್ಥಳೀಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಪತ್ರಿಕಾ ವಿತರಕರ ದಿನದ ನಿಮಿತ್ತ ಭಾನುವಾರ ಪತ್ರಿಕಾ ವಿತರಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ದುಶ್ಚಟ, ದುರ್ವ್ಯಸನಗಳಿಂದ ದೂರವಾಗಿ ಆಧ್ಯಾಥ್ಮದ ಅರಿವನ್ನು ಪಡೆದು ಒಳ್ಳೆಯ ವ್ಯಕ್ತಿತ್ವ ಹೊಂದಬೇಕು ಎಂದು ತಿಳಿಸಿದರು.
ಪತ್ರಿಕಾ ಛಾಯಾಗ್ರಾಹಕ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಯಾವುದೇ ಕೆಲಸ ಮೇಲಲ್ಲ, ಕೀಳಲ್ಲ. ಪತ್ರಿಕೆ ವಿತರಣೆ ಕಾರ್ಯ ಗೌರವಯುತ ಕೆಲಸವಾಗಿದ್ದು, ಜನರಿಗೆ ಸುದ್ದಿಗಳನ್ನು ಮುಟ್ಟಿಸುವ ಅವರ ಕಾರ್ಯವನ್ನು ಎಲ್ಲರೂ ಗೌರವಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಹಿರಿಯ ಪತ್ರಿಕಾ ವಿತರಕ ಬಸಪ್ಪ ಗೋರೆಬಾಳ ಮಾತನಾಡಿ, ಕರೋನಾ ಮುಂತಾದ ಸಂಕಷ್ಟದ ಸಂದರ್ಭದಲ್ಲಿಯೂ ವಿತರಕರು ಮನೆ ಮನೆಗೆ ಪತ್ರಿಕೆಗಳನ್ನು ಮುಟ್ಟಿಸುವ ಕೆಲಸ ಮಾಡಿದ್ದು, ಅನಾರೋಗ್ಯದ ನಡುವೆಯೂ ವಿತರಕರು ಮನೆ ಮನೆಗೆ ಪತ್ರಿಕೆ ಮುಟ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪತ್ರಿಕಾ ವಿತರಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿಜಯವಾಣಿ ಪ್ರಸಾರಾಂಗ ವ್ಯವಸ್ಥಾಪಕ ದೇವರಾಜ ಛತ್ರಬಂಧ, ವಿತರಕರಾದ ಹಾಜಿ, ಇಮ್ತಿಯಾಜ್, ಚಂದ್ರು ಯಕ್ಲಾಸಪುರ, ಮುನಿರೆಡ್ಡಿ, ದತ್ತು ಅಸ್ಕಿಹಾಳ, ವಿಜಯಕುಮಾರ, ವೀರೇಶ ಕರಡಿ, ನಾಗರಾಜ ಮರ್ಚೆಡ, ದೇವರಾಜ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net