

ಚಾಮರಾಜನಗರ: ಕರೊನಾ ವೈರಸ್ ನ ಅಟ್ಟಹಾಸದ ನಡುವೆಯೂ ಸೇನಾನಿಗಳಂತೆ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಿಕಾ ವಿತರಕರಿಗೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಆಹಾರ ಪದಾರ್ಥದ ಕಿಟ್ ವಿತರಣೆ ಮಾಡಿದರು.
ನಗರದ ಶ್ರೀಚಾಮರಾಜೇಶ್ವರ ದೇವಸ್ತಾನದ ಮುಂಭಾಗ ಗುರುವಾರ ಬೆಳಗ್ಗೆ 40 ಜನ ಪತ್ರಿಕಾ ವಿತರಕರಿಗೆ ಅಕ್ಕಿ,ಬೇಳೆ, ಎಣ್ಣೆ ಹಾಗೂ ಇನ್ನು ಹಲವು ದಿನಬಳಕೆ ವಸ್ತುಗಳನ್ನು ನೀಡಿ ಸಾಮಾಜಿಕ ಕಳಕಳಿ ಮೆರೆದರು.
ಈ ಸಂದರ್ಭದಲ್ಲಿ ವಕೀಲರಾದ ಮಂಜು ಹರವೆ, ಅರುಣ್‍ಕುಮಾರ್, ರಂಗಸ್ವಾಮಿ, ಸಾಧನ ಸಂಸ್ಥೆ ಸುರೇಶ್ ಹಾಜರಿದ್ದರು.