

ಸೇಡಂ: ಊರೆಲ್ಲ ಸುತ್ತಿ ಸುದ್ದಿ ಬರೆಯುವವರ ಕಾರ್ಯ ಒಂದೆಡೆಯಾದರೆ. ಸಾಕಷ್ಟು ಸುದ್ದಿಗಳನ್ನು ಹೊತ್ತು ತರುವ ಪತ್ರಿಕೆಯನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡುವ ವಿತರಕರ ಕಾರ್ಯ ಸ್ಮರಣೀಯ ಎಂದು ಕೊತ್ತಲ ಬಸವೇಶ್ವರ ಸಂಸ್ಥಾನದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ನಿಂದ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾ ವಿತರಕರಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಮಳೆ, ಚಳಿ, ಗಾಳಿ ಲೆಕ್ಕಿಸದೆ ಸೂರ್ಯೋದಯಕ್ಕೂ ಮುಂಚೆ ಪತ್ರಿಕೆಗಳನ್ನು ಮನೆಗೆ ತಲುಪಿಸುತ್ತಾರೆ. ಇಂತಹ ಪರಿಶ್ರಮಿಗಳನ್ನು ಸತ್ಕರಿಸುತ್ತಿರುವುದು ಸಂತಸದ ವಿಷಯ ಎಂದರು.
ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಪರಿಷತ್ ಜಿಲ್ಲಾಧ್ಯಕ್ಷ ಮಹಿಪಾಲರಡ್ಡಿ ಮುನ್ನೂರ ಮಾತನಾಡಿದರು.
ಪರಿಷತ್ ತಾಲೂಕು ಅಧ್ಯಕ್ಷೆ ಆರತಿ ಕಡಗಂಚಿ, ಪ್ರಮುಖರಾದ ಸಿದ್ದಪ್ಪ ತಳ್ಳಳ್ಳಿ, ಡಾ.ಶ್ರೀಶೈಲ ಬಿರಾದಾರ, ರುಕ್ಮಿಣಿ ಕಾಳಗಿ, ಚಂದ್ರಕಲಾ ಬಿದರಿ, ಕವಿತಾ ಖಜೂರಿ, ಶಿಲ್ಪಾ ಪಾಟೀಲ್, ಅಂಜನಾ ಕುಲಕರ್ಣಿ, ಚಂದ್ರಕಲಾ ಪಾಟೀಲ್, ರತ್ನಾ ನಿಡಗುಂದಾ, ಮಲ್ಲಿಕಾರ್ಜುನ ದಿಗ್ಗಾಂವ, ಶರಣಗೌಡ ಪಾಟೀಲ್ ಇದ್ದರು.
ಪ್ರೋ.ಶೋಬಾದೇವಿ ಚೆಕ್ಕಿ ಪ್ರಾರ್ಥಿಸಿದರು. ಪ್ರಮೀಳಾ ಬಿಬ್ಬಳ್ಳಿ ಸ್ವಾಗತಿಸಿ, ನಿರೂಪಣೆ ಮಾಡಿದರು. ಜಗದೀಶ್ವರಿ ಯರಗೋಳ ಇತರರಿದ್ದರು.