ಪತ್ರಿ ಹಳ್ಳಿಯಲ್ಲೂ ಸಹಕಾರ ಸಂಘ ತೆರೆಯಲು ಚಿಂತನೆ

14kglphoto4.....
Published on

ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಮಳಿಗೆಯನ್ನು ಶಾಸಕ ಆರ್.ನರೇಂದ್ರ ಲೋಕಾರ್ಪಣೆ ಮಾಡಿದರು.


ವ್ಯವಸಾಯಕ್ಕೆ ಬೇಕಾಗುವ ಗೊಬ್ಬರ, ಬಿತ್ತನೆ ಬೀಜ ಇನ್ನಿತರ ಕೃಷಿ ಪದಾರ್ಥಗಳನ್ನು ಶೇಖರಿಸಲು ಮಧುವನಹಳ್ಳಿಯಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಮಳಿಗೆ ನಿರ್ಮಿಸಲಾಗಿದೆ. ಎಂಡಿಸಿಸಿ ಬ್ಯಾಂಕ್ ನಿಂದ 20 ಲಕ್ಷ ರೂ., ನಬಾರ್ಡ್‌ನಿಂದ 2 ಲಕ್ಷ ರೂ. ಹಾಗೂ ಸಂಘದಿಂದ 2.81 ಲಕ್ಷ ರೂ. ವ್ಯಯಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಸಂಘದ ಸದಸ್ಯರು ಹಾಗೂ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.


ಸದಸ್ಯತ್ವ ಪಡೆಯಿರಿ: ಪ್ರತಿ ಗ್ರಾಮದಲ್ಲೂ ಕೃಷಿ ಪತ್ತಿನ ಸಹಕಾರ ಸಂಘ ತೆರೆಯಲು ಸರ್ಕಾರ ಚಿಂತಿಸಿದೆ. ಸಂಘದಿಂದ ರೈತರ ಅಭಿವೃದ್ಧಿ ಸಾಧ್ಯ. ಸದಸ್ಯರಿಗೆ 3 ಲಕ್ಷ ರೂ.ವರೆಗೂ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಇದನ್ನು 5 ಲಕ್ಷ ರೂ.ಗೆ ಹೆಚ್ಚಿಸಬೇಕೆಂಬ ಬೇಡಿಕೆ ಇಟ್ಟಿದ್ದೇನೆ. ಆದ್ದರಿಂದ ಸಂಘದ ಷೇರು ಪಡೆಯಲು ಸದಸ್ಯತ್ವ ಪಡೆದುಕೊಳ್ಳಬೇಕು. ಎಸ್ಸಿ-ಎಸ್ಟಿ ಜನಾಂಗಕ್ಕೆ ಉಚಿತವಾಗಿ ಸದಸ್ಯತ್ವ ಸಿಗಲಿದೆ. ಸಾಮಾನ್ಯ ಜನರಿಗೆ 600 ರೂ. ಶುಲ್ಕ ಇರುತ್ತದೆ ಎಂದರು.


ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ಸೋಮಶೇಖರ್, ಉಪಾಧ್ಯಕ್ಷೆ ಎಂ.ಶೀಲಾ, ನಿರ್ದೇಶಕರಾದ ಪಿ.ಬಿ.ಚಿಕ್ಕಬಸವೇಗೌಡ, ಬಿ.ಮಹದೇವಸ್ವಾಮಿ, ಎಸ್.ರಮೇಶ್. ಪಿ.ಬಾಲ ಸುಬ್ರಮಣ್ಯ ಸ್ವಾಮಿ, ಎಸ್.ಶಿವಮೂರ್ತಿ, ಎಚ್.ಎಂ.ಮಹದೇವಪ್ಪ, ಕೆ.ಎಸ್.ಮಹೇಶ್, ಮಹೇಶ್, ಶೈಲಜಾ, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ನಾಗರಾಜು ಆಡಳಿತ ಮಂಡಳಿ ಸದಸ್ಯರಾದ ಮಣಿ, ಪ್ರಸನ್ನ ಮೂರ್ತಿ, ಪ್ರತಾಪ್ ಕುಮಾರ್, ಮಧು, ಶಿವಕುಮಾರ್ ಮಧುವನಹಳ್ಳಿ, ಗ್ರಾಪಂ ಅಧ್ಯಕ್ಷೆ ಡಿ.ರೇಣುಕಾ, ಸದಸ್ಯ ಮಲ್ಲೇಶ್, ಸುರೇಶ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net