

ಕಕ್ಕೇರಾ: ಕ್ಷೇತ್ರದ ಪತ್ರಿ ಗ್ರಾಮಕ್ಕೂ ಮೂಲಭೂತ ಸೌಲಭ್ಯ ಒದಗಿಸಲಾಗುವುದು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಭರವಸೆ ನೀಡಿದರು.
ಪುರಸಭೆ ವ್ಯಾಪ್ತಿಯ ಎಂ.ಎA.ದೊಡ್ಡಿ, ಬನದೊಡ್ಡಿ, ಜುಮ್ಮಾರ ಕ್ಯಾಂಪ್ ಮತ್ತು ಹುಣಸಗಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಚುನಾವಣಾ ಪೂರ್ವದಲ್ಲಿ ನುಡಿದಂತೆ ನಡೆದು ಬಡವರಿಗೆ ದೀನದಲಿತರ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದರು.
ಅದೇ ರೀತಿ ಪುರಸಭೆ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು, ಶಿಕ್ಷಣ, ರಸ್ತೆ, ಸಾರಿಗೆ, ಆರೋಗ್ಯ, ಚರಂಡಿ ಸೇರಿ ಎಲ್ಲ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.
೨೦೨೩-೨೪ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆಯಡಿ ಕಕ್ಕೇರಾ ಪಟ್ಟಣದಿಂದ ಎಂಎAದೊಡ್ಡಿಗೆ ೧ ಕೋಟಿ ರೂ ವೆಚ್ಚದಲ್ಲಿ ಬಿ.ಟಿ. ರಸ್ತೆ ಕಾಮಗಾರಿ, ೬೦ ಲಕ್ಷ ರೂ ವೆಚ್ಚದಲ್ಲಿ ಬನದೊಡ್ಡಿ ಗ್ರಾಮದಿಂದ ಜುಲ್‌ಪುರ ದೊಡ್ಡಿವರೆಗೆ ಸಿಡಿಗಳ ನಿರ್ಮಾಣ ಹಾಗೂ ಜುಮ್ಮಾರದೊಡ್ಡಿಯಿಂದ ಗುಡೇರದೊಡ್ಡಿವರೆಗೆ ೧ ಕೋಟಿ ರೂ ವೆಚ್ಚದಲ್ಲಿ ಬಿ.ಟಿ.ರಸ್ತೆ ಕಾಮಗಾರಿ ಆರಂಭಿಸಲಾಗುತ್ತಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ತಾಕೀತು ಮಾಡಿದರು.
ಪ್ರಮುಖರಾದ ರಾಜಾ ವಿಜಯಕುಮಾರ ನಾಯಕ, ವೆಂಕಟೇಶನಾಯಕ ಜಹಾಗೀರದಾರ್, ಮಲ್ಲಣ್ಣ ಸಾಹುಕಾರ್, ನಿಂಗರಾಜ ಬಾಚಿಮಟ್ಟಿ, ವಿಠಲ್ ಯಾದವ್, ಪುರಸಭೆ ಅಧ್ಯಕ್ಷ ಸಣ್ಣಅಯ್ಯಾಳಪ್ಪ ಪೂಜಾರಿ, ಉಪಾಧ್ಯಕ್ಷ ದೇವಿಂದ್ರಪ್ಪ ದೇಸಾಯಿ, ನಿಂಗಯ್ಯ ಬೂದಗುಂಪಿ, ಅಯ್ಯಪ್ಪ ಗುಮೇದಾರ, ಲಕ್ಷö್ಮಣ ಲಿಂಗದಳ್ಳಿ, ಸೋಮನಾಥ ಸೊಲಾಪುರ, ಬಸಯ್ಯಸ್ವಾಮಿ, ಸಿದ್ದಣ್ಣ ದೇಸಾಯಿ, ರಾಮಣ್ಣಗೌಡ, ಮಲ್ಲಣ್ಣ ಹುಲಿಕೇರಿ, ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ ಸೇರಿ ವಿವಿಧ ಅಧಿಕಾರಿಗಳಿದ್ದರು.