

ಅಥಣಿ: ಪತ್ರಕರ್ತರು ವೃತ್ತಿ ಧರ್ಮದ ಮೌಲ್ಯಗಳನ್ನು ಎತ್ತಿಹಿಡಿಯುವ ಜತೆಗೆ ಸತ್ಯ ಸಂಗತಿಗಳನ್ನು ಸಮಾಜದ ಮುಂದಿಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಕೆಎಲ್ಇ ಸಂಸ್ಥೆಯ ಎಸ್ಎಸ್ಎಂಎಸ್ ಮಹಾವಿದ್ಯಾಲಯದ ಖೋತ ಸಭಾಂಗಣದಲ್ಲಿ ತಾಲೂಕು ಪತ್ರಕರ್ತರ ಸಂದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಪತ್ರಕರ್ತರು ಸರಿ, ತಪ್ಪುಗಳನ್ನ ತಿದ್ದುವ ಮೂಲಕ ಸುಂದರ ಸಮಾಜ ನಿರ್ಮಿಸಬೇಕು. ಪತ್ರಕರ್ತರು ದೂರದೃಷ್ಟಿಯುಳ್ಳವರಾಗಿದ್ದು, ಕೌಶಲ್ಯವನ್ನು ಕರಗತ ಮಾಡಿಕೊಂಡಿರಬೇಕು ಎಂದರು.
ಉದ್ಯಮಿ ನಿಖಿಲ ಪಾಟೀಲ ಮಾತನಾಡಿ, ಸಣ್ಣ ಸಣ್ಣ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವುದರಿಂದ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂದರು. ಸಾನ್ನಿಧ್ಯ ವಹಿಸಿದ್ದ ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಸರ್ಕಾರ ಮತ್ತು ಸಮಾಜದ ಕೊಂಡಿಯಾಗಿ ಪತ್ರಕರ್ತರು ಕೆಲಸ ಮಾಡುತ್ತಿರುವುದು ಸ್ಮರಣೀಯ. ಉತ್ತಮ ವರದಿಗಳಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗುತ್ತಿರುವುದು ಹೆಮ್ಮೆಯ ವಿಷಯ ಎಂದರು.
ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ ಹಂಜಿ, ಡಾ,ಬಸಗೌಡ ಕಾಗೆ, ಸಿಪಿಐ ರವೀಂದ್ರ ನಾಯ್ಕೋಡಿ, ಶಿಕಿ ಸೌಮ್ಯ ಗೋಕಾಕ, ಪತ್ರಕರ್ತ ಷಡರಿ ಕಂಪನ್ನವರ, ನ್ಯಾಯವಾದಿ ಕೆ.ಎ.ವನಜೋಳ ಅವರನ್ನು ಸತ್ಕರಿಸಲಾಯಿತು.
ಪತ್ರಕರ್ತರ ಸಂದ ಅಧ್ಯ ಅಣ್ಣಾಸಾಬ ತೆಲಸಂಗ, ಎಸ್.ಎಂ.ಎಸ್ ಕಾಲೇಜು ಪ್ರಾಚಾರ್ಯ ಬಿ.ಎಸ್.ಕಾಂಬಳೆ, ಪತ್ರಕರ್ತರಾದ ಬಸವರಾಜ ಚಮಕೇರಿ, ಸುಕುಮಾರ ಬನ್ನೂರೆ, ಸಿ.ಎ.ಇಟ್ನಾಳಮಠ, ರಾಜು ಗಾಲಿ, ಶಿವಕುಮಾರ ಅಪರಾಜ, ವಿಜಯ ಅಡಹಳ್ಳಿ, ರಮೇಶ ಬಾದವಾಡಗಿ, ಶೇಖರ ತೆವರೆಟ್ಟಿ, ರಾಕೇಶ ಮೈಗೂರ, ದೀಪಕ ಸಿಂಧೆ, ಪ್ರಕಾಶ ಕಾಂಬಳೆ, ಪರಶುರಾಮ ನಂದೇಶ್ವರ, ಹಿರಿಯರಾದ ಶಂಭುಲಿಂಗ ಮಮದಾಪೂರ, ವಿಜಯಕುಮಾರ ಬುರ್ಲಿ, ಅನೀಲ ಮೆಣಸಿ, ಜಿ.ಎಂ.ಹಿರೇಮಠ, ಬಸವರಾಜ ಯಾದವಾಡ, ವಿಜಯ ಹುದ್ದಾರ ಇತರರಿದ್ದರು.