ಪತ್ರಕರ್ತರು ಸುಂದರ ಸಮಾಜ ನಿರ್ಮಾಣಕ್ಕೆ ಶ್ರಮಿಸಲಿ

5..1
ಅಥಣಿ ಪಟ್ಟಣದ ಎಸ್‌ಎಸ್‌ಎಂಎಸ್ ಮಹಾವಿದ್ಯಾಲಯದ ಖೋತ ಸಭಾಂಗಣದಲ್ಲಿ ತಾಲೂಕು ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಶಾಸಕ ಲಕ್ಷ್ಮಣ ಸವದಿ, ಡಾ.ಎಂ.ಜಿ.ಹಂಜಿ, ನಿಖಿಲ ಪಾಟೀಲ, ಸೌಮ್ಯ ಗೋಕಾಕ ಇತರರಿದ್ದರು.
Published on

ಅಥಣಿ: ಪತ್ರಕರ್ತರು ವೃತ್ತಿ ಧರ್ಮದ ವೌಲ್ಯಗಳನ್ನು ಎತ್ತಿಹಿಡಿಯುವ ಜತೆಗೆ ಸತ್ಯ ಸಂಗತಿಗಳನ್ನು ಸಮಾಜದ ಮುಂದಿಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಎಸ್‌ಎಂಎಸ್ ಮಹಾವಿದ್ಯಾಲಯದ ಖೋತ ಸಭಾಂಗಣದಲ್ಲಿ ತಾಲೂಕು ಪತ್ರಕರ್ತರ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಪತ್ರಕರ್ತರು ಸರಿ, ತಪ್ಪುಗಳನ್ನ ತಿದ್ದುವ ಮೂಲಕ ಸುಂದರ ಸಮಾಜ ನಿರ್ಮಿಸಬೇಕು. ಪತ್ರಕರ್ತರು ದೂರದೃಷ್ಟಿಯುಳ್ಳವರಾಗಿದ್ದು, ಕೌಶಲ್ಯವನ್ನು ಕರಗತ ಮಾಡಿಕೊಂಡಿರಬೇಕು ಎಂದರು.

ಉದ್ಯಮಿ ನಿಖಿಲ ಪಾಟೀಲ ಮಾತನಾಡಿ, ಸಣ್ಣ ಸಣ್ಣ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವುದರಿಂದ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂದರು. ಸಾನ್ನಿಧ್ಯ ವಹಿಸಿದ್ದ ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿದರು.

ವೈದ್ಯಾಕಾರಿ ಡಾ.ಮಲ್ಲಿಕಾರ್ಜುನ ಹಂಜಿ, ಡಾ,ಬಸಗೌಡ ಕಾಗೆ, ಸಿಪಿಐ ರವೀಂದ್ರ ನಾಯ್ಕೋಡಿ, ಶಿಕ್ಷಕಿ ಸೌಮ್ಯ ಗೋಕಾಕ, ಪತ್ರಕರ್ತ ಷಡಕ್ಷರಿ ಕಂಪನ್ನವರ, ನ್ಯಾಯವಾದಿ ಕೆ.ಎ.ವನಜೋಳ ಅವರನ್ನು ಸತ್ಕರಿಸಲಾಯಿತು.

ಪತ್ರಕರ್ತರ ಸಂಘದ ಅಧ್ಯಕ್ಷ ಅಣ್ಣಾಸಾಬ ತೆಲಸಂಗ, ಎಸ್.ಎಂ.ಎಸ್ ಕಾಲೇಜು ಪ್ರಾಚಾರ್ಯ ಬಿ.ಎಸ್.ಕಾಂಬಳೆ, ಪತ್ರಕರ್ತರಾದ ಬಸವರಾಜ ಚಮಕೇರಿ, ಸುಕುಮಾರ ಬನ್ನೂರೆ, ಸಿ.ಎ.ಇಟ್ನಾಳಮಠ, ರಾಜು ಗಾಲಿ, ಶಿವಕುಮಾರ ಅಪರಾಜ, ವಿಜಯ ಅಡಹಳ್ಳಿ, ರಮೇಶ ಬಾದವಾಡಗಿ, ಶೇಖರ ತೆವರೆಟ್ಟಿ, ರಾಕೇಶ ಮೈಗೂರ, ದೀಪಕ ಸಿಂಧೆ, ಪ್ರಕಾಶ ಕಾಂಬಳೆ, ಪರಶುರಾಮ ನಂದೇಶ್ವರ, ಶಂಭುಲಿಂಗ ಮಮದಾಪೂರ, ವಿಜಯಕುಮಾರ ಬುರ್ಲಿ, ಅನೀಲ ಮೆಣಸಿ, ಜಿ.ಎಂ.ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net