

ಬಸವಕಲ್ಯಾಣ: ಸಮಾಜದಲ್ಲಿ ತಪ್ಪು-ಒಪ್ಪುಗಳನ್ನು ಎತ್ತಿ ತೋರಿಸುವ ಪತ್ರಕರ್ತರು ಸಮಾಜದ ಕನ್ನಡಿಯಂತೆ ಕೆಲಸ ಮಾಡುತ್ತಾರೆ ಎಂದು ಮಾಜಿ ಎಂಎಲ್ಸಿ ವಿಜಯಸಿಂಗ್ ಹೇಳಿದರು.
ನಗರದ ಶಾಸ್ತ್ರೀ ಭವನದಲ್ಲಿ ಶುಕ್ರವಾರ ಅವರಿಂದಲೇ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪತ್ರಕರ್ತರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಕೆಲಸಗಳಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂದು ವಿಶ್ಲೇಣಾತ್ಮಕವಾದ ವರದಿಯ ಮೂಲಕ ಘಟನೆಯಾಗಲಿ, ಸಮಸ್ಯೆಯಾಗಲಿ ಮುದ್ರಣ ಮಾದ್ಯಮವು ಸ್ಪಷ್ಟ ಹಾಗೂ ನಿಖರ ವರದಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ರಾಜ್ಯದಲ್ಲಿ ನಮ್ಮ ಸರ್ಕಾರವಿದೆ. ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಬಸವಕಲ್ಯಾಣದ ಜನರ ಅನುಕೂಲಕ್ಕಾಗಿ ಇಲ್ಲಿಯ ಆಸ್ಪತ್ರೆಗೆ ಮೇಲ್ದರ್ಜೆಗೇರಿಸಲು ಸಚಿವರಿಗೆ ಮನವಿ ಮಾಡಿದ್ದೆ, ಈಗ ಜಿಲ್ಲಾ ಆಸ್ಪತ್ರೆ ಆಗಲಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ. ಅಭಿವೃದ್ಧಿ ಕೆಲಸಗಳಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಅವಶ್ಯಕ ಎಂದರು.
ಬ್ಲಾಕ್ ಕಾಂಗ್ರೆಸ್ ಹಾಗೂ ಪಂಚ ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ನೀಲಕಂಠ ರಾಠೋಡ್, ನಗರಸಭೆ ಮಾಜಿ ಅಧ್ಯಕ್ಷ ಮೀರ್ ಅಜರಅಲಿ ನವರಂಗ, ನಗರ ಸಭೆ ಅಧ್ಯಕ್ಷ ಎಂಡಿ.ಸಗೀರೋದ್ದಿನ್, ಹಿರಿಯ ಪತ್ರಕರ್ತ ಗುರುನಾಥ ಗಡ್ಡೆ, ಬಸವರಾಜ ಕೌಟೆ ಮಾತನಾಡಿದರು. ನಂತರ ಪತ್ರಕರ್ತರನ್ನು ಸನ್ಮಾನಿಸಲಾಯಿತು.
ಬಸವಕಲ್ಯಾಣದಲ್ಲಿ ಪತ್ರಿಕಾ ಭವನ ನಿರ್ಮಾಣವಾಗಬೇಕು ಎನ್ನುವುದು ಬಹು ದಿನಗಳ ಬೇಡಿಕೆಯಾಗಿದೆ. ಆದಷ್ಟು ಬೇಗ ಒಂದು ಸೈಟ್ ಗುರುತಿಸಿ ಭವನ ನಿರ್ಮಿಸಲು ಪ್ರಯತ್ನಿಸಲಾಗುವುದು.
| ವಿಜಯಸಿಂಗ್ ಮಾಜಿ ಎಂಎಲ್ಸಿ