ಪತ್ರಕರ್ತರು ಸಮಾಜದ ಕನ್ನಡಿ ಇದ್ದಂತೆ

1609 McK 01
ಮಳಖೇಡನ ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಕಂಪನಿ ಮಾನವ ಸಂಪನ್ಮೂಲ ಅಧಿಕಾರಿ ಕೆ.ವಿ.ಎಸ್.ನಾರಾಯಣ ಮಾತನಾಡಿದರು. ಶರಣು ಮಹಾಗಾಂವ, ನಾಗಯ್ಯಸ್ವಾಮಿ ಬೊಮ್ನಳ್ಳಿ, ಸಿದ್ದಯ್ಯಸ್ವಾಮಿ ಆಡಕಿ, ಜಗನ್ನಾಥ ತರನಳ್ಳಿ ಇದ್ದರು.
Published on

ಮಳಖೇಡ: ದೇಶದ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಜತೆಗೆ ನಾಲ್ಕನೇ ಅಂಗವಾದ ಪತ್ರಿಕಾರಂಗವು ಪ್ರಬಲವಾಗಿದ್ದು, ಪತ್ರಕರ್ತರು ಸಮಾಜದ ಕನ್ನಡಿ ಇದ್ದಂತೆ ಎಂದು ರಾಜಶ್ರೀ ಸಿಮೆಂಟ್ ಕಂಪನಿ ಮಾನವ ಸಂಪನ್ಮೂಲ ಅಧಿಕಾರಿ ಕೆ.ವಿ.ಎಸ್.ನಾರಾಯಣ ಹೇಳಿದರು.

ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ಅಲ್ಟ್ರಾಟೇಕ್ ವೆಲ್‌ಫೇರ್ ಕಮ್ಯೂನಿಟಿಯಿಂದ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿನ ಕಲುಷಿತ ತೊಡೆದು ಹಾಕುವುದರ ಜತೆಗೆ, ಉತ್ತಮ ಕಾರ್ಯಗಳಿಗೆ ಉತ್ತೇಜನ ನೀಡುವಂತಹ ಕಾರ್ಯವನ್ನು ಪತ್ರಕರ್ತರು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಪತ್ರಕರ್ತರ ತಾಲೂಕು ಸಂಘದ ಅಧ್ಯಕ್ಷ ಶರಣು ಮಹಾಗಾಂವ, ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಆಡಕಿ, ಪತ್ರಕರ್ತರಾದ ನಾಗಯ್ಯಸ್ವಾಮಿ ಬೊಮ್ನಳ್ಳಿ, ಜಗನ್ನಾಥ ತರನಳ್ಳಿ, ಸಿದ್ಧಲಿಂಗಯ್ಯಸ್ವಾಮಿ ಮಲಕೂಡ, ಅವಿನಾಶ ಬೋರಂಚಿ, ರಮೇಶ ಇಂಜಳ್ಳಿಕರ್, ಸುಧೀರ ಬಿರಾದಾರ, ಶರಣಯ್ಯ ಬೊಮ್ನಳ್ಳಿ, ಶರಣಪ್ಪ ಎಳ್ಳಿ, ಸುನೀಲ ರಾಣಿವಾಲ, ಪ್ರಮುಖರಾದ ನಾಗರಾಜ ಸುತಾರ, ರವಿಕುಮಾರ, ವಿವೇಕ ಬಟಗೇರಾ, ಮಾಯಾದೇವಿ, ಪಾರ್ವತಿ, ಕಾಶೀಬಾಯಿ ಇತರರಿದ್ದರು. ಶರಣು ಯರಗೋಳ ಸ್ವಾಗತಿಸಿದರು. ಅಶ್ವಿನಿ ರಾಠೋಡ್ ನಿರೂಪಣೆ ಮಾಡಿದರು. ಸೋಮಶೇಖರ ದೇಗಲ್ಮಡಿ ವಂದಿಸಿದರು.

ಸೇಡಂ ತಾಲೂಕಿನ ಎಲ್ಲ ಪತ್ರಕರ್ತರರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net