ಪತ್ರಕರ್ತರ ಸೇವೆ ಶ್ಲಾಘನೀಯ

1Athani2
Published on

ಅಥಣಿ: ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪತ್ರಿಕಾರಂಗದ ಕೊಡುಗೆ ಅಪಾರ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ಪತ್ರಿಕಾ ದಿನಾಚರಣೆ ನಿಮಿತ್ತ ಸಸಿ ನೆಟ್ಟು ಮಾತನಾಡಿ, ಮಳೆ, ಚಳಿ, ಗಾಳಿ ಎನ್ನದೆ ಸಮಾಜ ಸೇವೆಯಲ್ಲಿ ತೊಡಗಿರುವ ಪರ್ತಕರ್ತರ ಸೇವೆ ಶ್ಲಾಘನೀಯ. ಅವರಿಗೆ ಸುರಕ್ಷತೆ, ಭದ್ರತೆ ಇಲ್ಲದೆ ಇರುವುದು ವಿಷಾದನೀಯ. ಪರ್ತಕರ್ತರ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ದಿನನಿತ್ಯದ ಮಾಹಿತಿ ಒದಗಿಸುವ ಪತ್ರಕರ್ತರನ್ನು ಎಲ್ಲರೂ ಗೌರವಿಸಬೇಕು ಎಂದು ತಿಳಿಸಿದರು.

ವರದಿಗಾರರಾದ ಪರಶುರಾಮ ನಂದೇಶ್ವರ, ಆರ್.ಎಸ್.ದೊಡ್ಡನಿಂಗಪಗೋಳ, ರಾಜು ಗಾಲಿ, ಶೇಖರ ತೆವರೆಟ್ಟಿ, ಅಣ್ಣಾಸಾಹೇಬ ತೆಲಸಂಗ, ಶಿವಕುಮಾರ ಅಪರಾಜ, ವಿಜಯ ಅಡಹಳ್ಳಿ, ರಮೇಶ ಬಾದವಾಡಗಿ, ರಾಕೇಶ ಮೈಗೂರ, ಜಬ್ಬಾರ ಚಿಂಚಲಿ, ಕಲ್ಲಪ್ಪ ಕನಾಳ, ಸಂತೋಷ ಬಡಕಂಬಿ, ಶಿವು ಪೂಜಾರಿ, ವಿಲಾಸ ಕಾಂಬಳೆ, ಅಜಿತ್ ಕಾಂಬಳೆ, ಸಂದೀಪ ಘಟಕಾಂಬಳೆ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net