

ಬಸವಕಲ್ಯಾಣ: ಕರೊನಾ ಕಷ್ಟದ ಕಾಲದಲ್ಲಿಯೂ ಪತ್ರಕರ್ತರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಾಜಪರ ಚಿಂತನೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವುದರ ಜತೆಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಬೇಕು ಎಂದು ಹುಲಸೂರನ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.
ನಗರದ ವರ್ಷಾ ಫಂಕ್ಷನ್ ಹಾಲ್ನಲ್ಲಿ ಹುಲಸೂರಿನ ಶ್ರೀ ಸಾಯಿನಾಥ ದೇವಸ್ಥಾನ ಟ್ರಸ್ಟ್ನಿಂದ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅನೀಲ ಭೂಸಾರೆ ಅವರು ಪತ್ರಕರ್ತ ಸೇವೆ ಗುರುತಿಸಿ ಅವರಿಗೆ ಸನ್ಮಾನ ಮಾಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ ದೇವಸ್ಥಾನ ಟ್ರಸ್ಟ ಅಧ್ಯಕ್ಷ ಹಾಗೂ ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ ಮಾತನಾಡಿ, ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಧ್ಯಮ ಕ್ಷೇತ್ರ ಸಮರ್ಥವಾಗಿ ನಿರ್ವಹಿಸುತ್ತಿದ್ದೆ. ಪತ್ರಕರ್ತರ ಕಾರ್ಯ ಅತ್ಯಂತ ಮಹತ್ವದ್ದಾಗಿದ್ದು, ಪತ್ರಿಕಾ ದಿನಾಚರಣೆ ನಿಮಿತ್ತ ಪತ್ರಕರ್ತರನ್ನು ಟ್ರಸ್ಟ್ನಿಂದ ಸನ್ಮಾನಿಸಲಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ ಹಿರನಾಗಾಂವದ ಶ್ರೀ ಜಯಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಹುಲಸೂರು ತಾಲೂಕು ಹೋರಾಟ ಸಮಿತಿ ಸಂಚಾಲಕ ಎಂ.ಜಿ ರಾಜೋಳೆ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಪತ್ರಕರ್ತರು ಮತ್ತು ಬಿಜೆಪಿ ನೂತನ ಪದಾಧಿಕಾರಿಗಳು ಹಾಗೂ ಪಕ್ಷದ ನಗರಸಭೆ ಸದಸ್ಯರನ್ನು ಸನ್ಮಾನಿಸಲಾಯಿತು.
ಟ್ರಸ್ಟ ಉಪಾಧ್ಯಕ್ಷ ಓಂಕಾರ ಪಟ್ನೆ, ಬಿಜೆಪಿ ತಾಲೂಕು ಗ್ರಾಮೀಣ ಅಧ್ಯಕ್ಷ ಅಶೋಕ ವಕಾರೆ, ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣಿ, ಬಿಜೆಪಿ ಮುಖಂಡರಾದ ಅಣ್ಣಾರಾವ ಮಜಗೆ, ಪಂಡರಿನಾಥ ಜಾಧವ, ದೀಪಕ ಗಾಯಕವಾಡ, ನಗರಸಭೆ ಸದಸ್ಯ ದೀಪಕ ಗುಡ್ಡಾ, ಅರವಿಂದ ಮುತ್ಯಾ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಶರಣಪ್ಪ ಹೂಗಾರ, ಕಲ್ಯಾಣರಾವ ಮದರಗಾಂವಕರ್, ರಾಜಕುಮಾರ ಹೊನ್ನಾಡೆ, ಖುತಬೋದ್ದಿನ್ ಇತರರಿದ್ದರು.
ರಾಜಕುಮಾರ ನಿಡೋದೆ ಸ್ವಾಗತಿಸಿ ನಿರೂಪಣೆ ಮಾಡಿದರು.