

ಹಾಸನ: ಪ್ರತಿವರ್ಷ ನಡೆಯುವ ಪತ್ರಿಕಾ ದಿನಾಚರಣೆ ಅಂಗವಾಗಿ ಹಾಸನ ಜಿಲ್ಲಾ ಪತ್ರಕರ್ತರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ಆಟೋಟ ಹಾಗೂ ಕ್ರೀಡಾಕೂಟ ಯಶಸ್ವಿಯಾಯಿತು.
ಕ್ರಿಕೆಟ್‌ನಲ್ಲಿ ನಗರ ಹಾಗೂ ಜಿಲ್ಲೆಯ ಪತ್ರಕರ್ತರನ್ನೊಳಗೊಂಡ 6 ತಂಡ ಭಾಗಿಯಾಗಿದ್ದವು. ಅಂತಿಮವಾಗಿ ಮೋಹನ್ ಕಣತೂರು ನೇತೃತ್ವದ ವಾಟೆಹೊಳೆ ತಂಡ ಪ್ರಥಮ, ಹಿಂದೂ ಪ್ರಕಾಶ್ ನೇತೃತ್ವದ ಯಗಚಿ ತಂಡ ದ್ವಿತೀಯ ಮತ್ತು ಕೆ.ಆರ್.ಮಂಜುನಾಥ್ ನೇತೃತ್ವದ ಲಕ್ಷ್ಮಣತೀರ್ಥ ತಂಡ ಮೂರನೇ ಸ್ಥಾನ ಪಡೆಯಿತು.
ಗುಂಡು ಎಸೆತ: 30 ವರ್ಷದೊಳಗಿನ ಗುಂಡು ಎಸೆತ ಸ್ಪರ್ಧೆಯಲ್ಲಿ ಜನಮಿತ್ರ ಪತ್ರಿಕೆಯ ದೇವಿ ಪ್ರಕಾಶ್ ಪ್ರಥಮ, ಸಂಜಯ್ ದ್ವಿತೀಯ ಮತ್ತು ಸತ್ಯದ ಹೊನಲು ಪತ್ರಿಕೆಯ ಧರ್ಮೇಶ್ ತೃತೀಯ ಸ್ಥಾನ ಪಡೆದರು.
30-40 ವರ್ಷದ ವಯೋಮಾನದವರಲ್ಲಿ ನಂದನ್ ಆಲೂರು ಪ್ರಥಮ, ಲೋಕೇಶ್ ಬೇಲೂರು ದ್ವಿತೀಯ ಮತ್ತು ಸತೀಶ್ ಆಲೂರು ಮೂರನೇ ಸ್ಥಾನ ಪಡೆದರು.
40-50 ವರ್ಷದ ವರ್ಗದಲ್ಲಿ ಸ್ವರೂಪ್, ಗಣೇಶ್ ಬೇಲೂರು ಮತ್ತು ಸಕಲೇಶಪುರದ ದಯಾನಂದ ಕ್ರಮವಾಗಿ ಮೂರು ಸ್ಥಾನ ಪಡೆದರು.
50-60 ವರ್ಷದವರಲ್ಲಿ ಶಿವಾನಂದ ತಗಡೂರು ಪ್ರಥಮ, ಮಲ್ನಾಡ್ ಮೆಹಬೂಬ್ ದ್ವಿತೀಯ ಮತ್ತು ಜೈಭೀಮ್ ಮಂಜು 3ನೇ ಸ್ಥಾನ ಪಡೆದವು.
60 ವರ್ಷ ಮೇಲ್ಪಟ್ಟವರಲ್ಲಿ ಪುಟ್ಟರಾಜು ಕೆ.ಪಿ., ಬಿ.ಆರ್.ಉದಯಕುಮಾರ್ ಮತ್ತು ಉದಯರವಿ ಕ್ರಮವಾಗಿ 3 ಸ್ಥಾನ ಪಡೆದರು.
100 ಮೀ ಓಟದ ಸ್ಪರ್ಧೆ: 25-30 ವರ್ಷ: ಧರ್ಮೇಶ್ ಪ್ರಥಮ, ಸಂತೋಷ್ ಕುಮಾರ್ ದ್ವಿತೀಯ, ಸಂದೀಪ್ ತೃತೀಯ.
30 ವರ್ಷದೊಳಗೆ: ಮಧು ಪವರ್ ಟಿವಿ ಪ್ರಥಮ, ದೇವಿಪ್ರಸಾದ್ ಜನಮಿತ್ರ ದ್ವಿತೀಯ, ಅಭಿಜಿತ್ ಜನಮಿತ್ರ ತೃತೀಯ.
30-40 ವರ್ಷ: ನವೀನ್ ಬೈರಾಪುರ, ನಾಡಸಹ್ಯಾದ್ರಿ ಪ್ರಥಮ, ಲವಕುಮಾರ್, ವಿಜಯ ಕರ್ನಾಟಕ ದ್ವಿತೀಯ, ಸಾಗರ್‌ರಾಜು, ಪ್ರಜೋದಯ ತೃತೀಯ.
40-50 ವರ್ಷ: ಯೋಗೇಶ್ ಜನಮಿತ್ರ ಪ್ರಥಮ, ಸುಧೀರ್, ಉದಯವಾಣಿ, ದ್ವಿತೀಯ, ಸ್ವರೂಪ್ ಮೈಸೂರು ದಿಗಂತ, ತೃತೀಯ.
50 ವರ್ಷ ಮೇಲ್ಪಟ್ಟು: ಪ್ರಕಾಶ್ ಹಿಂದೂ, ಪ್ರಥಮ, ಜೈಭೀಮ್ ಮಂಜು ದ್ವಿತೀಯ ಹಾಗೂ ಅಕ್ಬರ್ ಜುನೈದ್ ತೃತೀಯ.
60 ವರ್ಷ ಮೇಲ್ಪಟ್ಟು: ಬಿ.ಆರ್.ಉದಯಕುಮಾರ್ ಪ್ರಥಮ,ಶಿವಾನಂದ ತಗಡೂರು ದ್ವಿತೀಯ ಮತ್ತು ಕೆ.ಆರ್.ಮಂಜುನಾಥ್ ತೃತೀಯ ಸ್ಥಾನ ಪಡೆದರು.