ಪತ್ನಿಯನ್ನು ಕೊಲೈಗೈದ ಪತಿಗೆ ಜೈಲು

court new
Published on

ಕಲಬುರಗಿ: ಪತ್ನಿಯನ್ನು ಕೊಲೈಗೈದ ಪತಿ ಸೈಯದ್ ಇಬ್ರಾಹಿಂಗೆ ಐದು ವರ್ಷ ಜೈಲು ಶಿಕ್ಷೆ, ೨೦ ಸಾವಿರ ದಂಡ ವಿಧಿಸಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮೋಹನ ಬಾಡಗಂಡಿ ಆದೇಶಿಸಿದ್ದಾರೆ. ೨೦೨೧ರ ಅಕ್ಟೋಬರ್ ೧೦ರಂದು ನಗರದ ಬಸವ ನಗರದ ರಾಮಚಕ್ಕಿ ಹತ್ತಿರದ ಮನೆಯಲ್ಲಿದ್ದಾಗ ಸರಾಯಿ ಕುಡಿದು ಏಕೆ ಬಂದಿದ್ದಿ ಎಂದು ಪತ್ನಿ ನಸೀಮಾ ಬೇಗಂ ಪತಿ ಸೈಯದ್ ಇಬ್ರಾಹಿಂನನ್ನು ಪ್ರಶ್ನಿಸಿದ್ದಾಳೆ. ಪ್ರಶ್ನಿಸಿದ್ದಕ್ಕೆ ರೇಜರ್‌ನಿಂದ ಕುತ್ತಿಗೆಯ ಗಂಟಲಿನ ಮೇಲೆ ಗಂಭೀರ ಗಾಯ ಮಾಡಿದ್ದ. ಚಿಕಿತ್ಸೆಗೆ ದಾಖಲು ಮಾಡಿದ್ದರೂ ಫಲಕಾರಿಯಾಗದೆ ೨೦೨೧ ಅಕ್ಟೋಬರ್ ೨೨ರಂದು ಮೃತಪಟ್ಟಿದ್ದಳು. ಈ ಕುರಿತು ಪೊಲೀಸ್ ನಿರೀಕ್ಷಕ ದಿಲೀಪಕುಮಾರ ಸಾಗರ ಕೋರ್ಟ್ಗೆ ದೋಷಾರೋಪಣೆ ಪತ್ರ ಸಲ್ಲಿಸಿದರು. ಮಹಿಳಾಪೊಲೀಸ್ ಠಾಣೆಯ ಸವಿತಾ, ಗೀತಾ, ಧಾಮೋಧರ ಅವರು ಕೇಸ್‌ನ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮೋಹನ ಬಾಡಂಗಡಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಎಸ್.ಆರ್.ನರಸಿಂಹಲು ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net