ಪತ್ನಿಯನ್ನು ಕೊಲೆಗೈದ ಪತಿಗೆ ಜೀವಾವಧಿ ಶಿೆ

court
Published on

ಕಲಬುರಗಿ: ಶೀಲ ಶಂಕಿಸಿ ಪತ್ನಿಯನ್ನು ಕೊಲೆಗೈದ ಪತಿಗೆ ಜೀವಾವಧಿ ಕಾರಾಗೃಹ ಶಿೆ ವಿಧಿಸಿ ೪ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಚಿಂಚೋಳಿ ತಾಲೂಕಿನ ಇರಕಪಳ್ಳಿಯ ರವಿಶಂಕರ ಶಿೆಗೆ ಒಳಗಾದ ಕೊಲೆಗಾರ. ಪತ್ನಿ ನವೀತಾ ಕೊಲೆಗೀಡಾದವರು. ಇಬ್ಬರು ಒಂದೇ ಗ್ರಾಮದವರಾಗಿದ್ದು, ಸ್ವಗ್ರಾಮ ಇರಕಪಳ್ಳಿಯ ನವೀತಾ ಜತೆ ರವಿಶಂಕರ ಮದುವೆ ಆಗಿದ್ದ. ಮದುವೆ ಆದ ಒಂದು ರ‍್ಷದಲ್ಲೇ ಪತಿ, ಪತ್ನಿ ಮಧ್ಯೆ ಮನಸ್ಥಾಪ ಉಂಟಾಗಿದೆ. ೨೦೧೭ ನ.೨೨ರಂದು ಇರಕಪಳ್ಳಿಯ ಮನೆಯಲ್ಲಿ ಪತ್ನಿ ಶೀಲ ಶಂಕಿಸಿ, ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಕುತ್ತಿಗೆ ಹಿಸುಕಿ ಕೊಲೆ ಮಾಡಿ, ಓಡಿ ಹೋಗಿದ್ದ. ಈ ಕುರಿತು ಸುಲೇಪೇಟ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ಪ್ರಭು ದುದ್ದಗಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಕರಣ ಗುಜ್ವಾರ್​ ಆರೋಪಿಗೆ ಆರು ತಿಂಗಳ ಶಿೆ ಹಾಗೂ ಜೀವಾವಧಿ ಕಾರಾಗೃಹ ಶಿೆ ವಿಧಿಸಿ ತರ‍್ಪು ನೀಡಿದ್ದಾರೆ. ರ‍್ಕಾರದ ಪರ ೪ನೇ ಅಪರ ರ‍್ಕಾರಿ ಅಭಿಯೋಜಕ ಕೆ.ಆರ್​.ನಾಗರಾಜ ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net