

ಕಲಬುರಗಿ: ಕುಡಿಯಲು ಹಣ ನೀಡಿಲ್ಲ ಎಂದು ಹೆಂಡಯನ್ನು ಕೊಲೆ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ೫೦ ಸಾವಿರ ರೂ. ದಂಡ ವಿಧಿಸಿ ೫ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ತರ‍್ಪು ನೀಡಿದೆ. ಯಡ್ರಾಮಿ ತಾಲೂಕಿನ ಕುಕನೂರು ಗ್ರಾಮದ ಮಹಾಂತಪ್ಪ ನಿಂಗಪ್ಪ ದೊಡ್ಡಮನಿ ಕೊಲೆ ಮಾಡಿದ ಅಪರಾಧಿ. ಜೇರ‍್ಗಿ ತಾಲೂಕಿನ ಕುರನಳ್ಳಿಯಲ್ಲಿ ವಾಸವಾಗಿದ್ದ ಮಹಾಂತಪ್ಪಗೆ ೧೦ ರ‍್ಷ ಹಿಂದೆ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ. ಕುಡಿತಕ್ಕಾಗಿ ಹಣ ನೀಡುವಂತೆ ಹೆಂಡತಿಯನ್ನು ಪೀಡಿಸುತ್ತಿದ್ದ. ೨೦೨೩, ಡಿ.೨೬ರಂದು ಸಂಜೆ ವೇಳೆ ಹಣ ನೀಡುವಂತೆ ಪತ್ನಿ ಸಂಗೀತಾಗೆ ಹಣ ನೀಡುವಂತೆ ಕೇಳಿದ್ದ, ಆ ವೇಳೆ ಹಣ ನೀಡದ ಸಂಗೀತಾಳ ತಲೆ ಮೇಲೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದ. ಈ ಕುರಿತು ಮೃತಳ ತಂದೆ ಮಲ್ಲಪ್ಪ ಕಟ್ಟಿಮನಿ ನೆಲೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖಾಧಿಕಾರಿಗಳಾದ ಪಿಎಸ್ಐ ಜ್ಯೋತಿ, ಪಿಐ ರಾಜೇಸಾಹೇಬ್ ನದ್ಾ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಮಹ್ಮದ್ ಮುಜೀರ್ ಉಲ್ಲಾ ಜೀವಾವಧಿ ಶಿಕ್ಷೆ ನೀಡಿ, ೫೦ ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ರ‍್ಕಾರಿ ಅಭಿಯೋಜಕ ಹಯ್ಯಾಳಪ್ಪ ಎನ್. ಬಳಬಟ್ಟಿ ರ‍್ಕಾರದ ಪರ ವಾದಿಸಿದ್ದರು. ನೆಲೋಗಿ ಪೊಲೀಸ್ ಠಾಣೆ ಸಿಬ್ಬಂದಿ ಬಸವರಾಜ ಎಂ.ಪಾಟೀಲ್ ನ್ಯಾಯಾಲಕ್ಕೆ ಸಾಕ್ಷಿ ಹಾಜರು ಮಾಡಿದ್ದರು.