ಪತ್ನಿ ಜತೆ ದೂರವಾಣಿಯಲ್ಲಿ ಮಾತನಾಡಿದ ದರ್ಶನ್

Published on

ಬಳ್ಳಾರಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜತೆ ದೂರವಾಣಿ ಕರೆಯಲ್ಲಿ ಹತ್ತು ನಿಮಿಷದವರೆಗೆ ಬುಧವಾರ ಮಾತನಾಡಿದರು.
ಬೆಂಗಳೂರಿನ ಪರಪ್ಪನ ಆಗ್ರಹಾರದಿಂದ ನಗರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಂಡು ಆರು ದಿನ ಕಳೆದಿವೆ. ಅಲ್ಲದೆ, ಬುಧವಾರ ಕೋರ್ಟ್‌ಗೆ ಚಾರ್ಜಶೀಟ್ ಸಲ್ಲಿಕೆ ಹಾಗೂ ವಿವಿಧ ಮಾಹಿತಿ ತಿಳಿಯಲು ಪತ್ನಿ ವಿಜಯಲಕ್ಷ್ಮಿ ಜತೆ ದೂರವಾಣಿ ಕರೆ ಮಾಡಲು ಜೈಲು ಅಧಿಕಾರಿಗಳಿಗೆ ಬಳಿ ದರ್ಶನ್ ಮನವಿ ಮಾಡಿದ್ದರು. ಜೈಲು ಸಿಬ್ಬಂದಿ ಮನವಿಗೆ ಸ್ಪಂದಿಸಿ, ಬುಧವಾರ ಮಧ್ಯಾಹ್ನ ದೂರವಾಣಿ ಕರೆಯಲ್ಲಿ ಮಾತನಾಡಲು ದರ್ಶನ್‌ಗೆ ಅನುಮತಿ ನೀಡಿತು.
ಪ್ರಿಸನ್ ಕಾಲ್ ಸಿಸ್ಟಮ್ : ದರ್ಶನ್ ಪ್ರಿಸನ್ ಕಾಲ್ ಸಿಸ್ಟಮ್ ಪದ್ಧತಿಯಲ್ಲಿ ಪತ್ನಿ ವಿಜಯಲಕ್ಷ್ಮಿಯೊಂದಿಗೆ ಹತ್ತು ನಿಮಿಷವರೆಗೆ ಮಾತನಾಡಿದರು. ಇದೇ ವೇಳೆ ವಿಜಯಲಕ್ಷ್ಮಿ ಆರೋಗ್ಯ ವಿಚಾರಿಸುತ್ತಿದ್ದಂತೆ ದರ್ಶನ ಬಾವುಕರಾದರು. ಅಲ್ಲದೆ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಬುಧವಾರ ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವುದರಿಂದ, ಅದರ ಬಗ್ಗೆ ಕೂಡ ಮಾಹಿತಿ ಪಡೆದರು ಕರೆ ಕಟ್ ಮಾಡಿದರು. ಜೈಲು ಸಿಬ್ಬಂದಿ ಈ ಇಬ್ಬರ ಸಂಭಾಷಣೆಯನ್ನು ದಾಖಲೆಗಳಗಾಗಿ ರೆಕಾರ್ಡ್ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net