ಪತ್ನಿ ಕೊಂದವನು ಶವವಾಗಿ ಪತ್ತೆ

ಪತ್ನಿ ಕೊಂದವನು ಶವವಾಗಿ ಪತ್ತೆ
Published on

ಬೇಲೂರು : ತಾಲೂಕಿನ ಚೀಕನಹಳ್ಳಿಯಲ್ಲಿ ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆಂದು ತೆರಳಲುತಿದ್ದ ಪತ್ನಿ ಇಂದ್ರಮ್ಮನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಚ್ಚಿ ಕೊಲೆ ಮಾಡಿದ್ದ 53 ವರ್ಷದ ಚಂದ್ರಯ್ಯ, ಪಕ್ಕದ ಕಾಫಿ ತೋಟದಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹತ್ತು ದಿನಗಳ ನಂತರ ಶನಿವಾರ ಬೆಳಕಿಗೆ ಬಂದಿದೆ.

ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚೀಕನಹಳ್ಳಿ ಗ್ರಾಮದಲ್ಲಿ 11 ದಿನಗಳ ಹಿಂದಿನ ಮಂಗಳವಾರ ಬೆಳಗ್ಗೆ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.

ಆದರೆ ಪತ್ನಿಯನ್ನು ಕೊಲೆ ಮಾಡಿದ್ದ ಕಾಣೆಯಾಗಿದ್ದ ಪತಿ ಚಂದ್ರಯ್ಯನಿಗಾಗಿ ಅರೇಹಳ್ಳಿ ಪೊಲೀಸರು ಹುಡುಕಾಟ ನಡೆಸಿದ್ದರು ಸಿಕ್ಕಿರಲಿಲ್ಲ. ಆದರೆ ಶನಿವಾರ ಚೀಕನಹಳ್ಳಿಯ ಕೇಶವಮೂರ್ತಿಯವರ ಪಕ್ಕದ ಕಾಫಿ ತೋಟದಲ್ಲಿ ಕೆಲಸಕ್ಕೆಂದು ಕೂಲಿ ಕಾರ್ಮಿಕರು ತೆರಳಿದ್ದ ಸಂದರ್ಭ ಮರಕ್ಕೆ ನೇಣು ಬೀಗಿದು ಕೋಂಡು ಆತ್ಮಹತ್ಯೆಗೆ ಶರಣಾಗಿದ್ದ ಚಂದ್ರಯ್ಯನ ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಹತ್ತು ದಿನಗಳ ನಂತರ ಬೆಳಕಿಗೆ ಪತ್ತೆಯಾಗಿದೆ. ವಿಷಯ ತಿಳಿದು ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿ ವೀಕ್ಷಿಸಿದ ನಂತರ ಪೊಲೀಸ್ರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್, ಪಿಎಸ್‌ಐ ಸುರೇಶ್ ಹಾಗೂ ಸಿಬ್ಬಂದಿ ಭೇಟಿನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net