

ಕೊಳ್ಳೇಗಾಲ: ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ಪತ್ನಿ ಎದುರೇ ಆತ್ಮಹತ್ಯೆ ಮಾಡಿಕೊಳ್ಳಲು ಕಾವೇರಿ ನದಿಗೆ ಹಾರಿದ್ದ ಪತಿಯ ಮೃತದೇಹ ಕಾರ್ಯಾಚರಣೆ ಬಳಿಕ ಭಾನುವಾರ ಪತ್ತೆಯಾಗಿದೆ.
ಕೊಳ್ಳೇಗಾಲ ತಾಲೂಕಿನ ಕಜ್ಜಿಹುಂಡಿ ಗ್ರಾಮದ ಮಂಜುನಾಥ್(40) ಮೃತ ವ್ಯಕ್ತಿ. ಈತ ಬೆಳಕವಾಡಿ ಹೊಸಳ್ಳಿ ಗ್ರಾಮದ ರಾಜೇಶ್ವರಿ ಅವರ ಜತೆ ಕಳೆದ 13 ವರ್ಷಗಳ ಹಿಂದೆ ಮದುವೆಯಾಗಿದ್ದ. ದಂಪತಿಗೆ 10 ಮತ್ತು 5 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಕಜ್ಜಿಹುಂಡಿ ಗ್ರಾಮದಿಂದ ಬೈಕ್‌ನಲ್ಲಿ ಬೆಳಕವಾಡಿಗೆ ಪತ್ನಿ ಜತೆಗೆ ಮಂಜುನಾಥ್ ತೆರಳುತ್ತಿದ್ದರು. ಆಗ ಸಣ್ಣದಾಗಿ ಆರಂಭಗೊಂಡ ಜಗಳ ಏಕಾಏಕಿ ವಿಕೋಪಕ್ಕೆ ಹೋಗಿದ್ದು, ನಂತರ ಬೈಕ್ ನಿಲ್ಲಿಸಿ ಮಂಜುನಾಥ್ ಸೇತುವೆಯಿಂದ ನದಿಗೆ ಹಾರಿದ್ದನು. ಬಳಿಕ ಅಗ್ನಿಶಾಮಕ ದಳ ಮತ್ತು ಪೊಲೀ ಸ್ ಸಿಬ್ಬಂದಿ ಮೂರು ದಿನ ಶೋಧ ಕಾರ್ಯಾಚರಣೆ ಮಾಡಿದ್ದರು. ಆದರೆ ಮಂಜುನಾಥ್ ಅವರ ಕುರುಹು ಪತ್ತೆಯಾಗಿರಲಿಲ್ಲ. ಆದರೆ ಮೂರು ದಿನದ ಬಳಿಕ ಕಾವೇರಿ ನದಿಯಲ್ಲಿ ಶವ ಪತ್ತೆಯಾಗಿದೆ. ಕೊಳ್ಳೇಗಾಲ ಪಟ್ಟ ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.