ಪತ್ತೇಪೂರ ಪಿಟಿ ಗ್ರಾಮದ ವ್ಯಾಪ್ತಿಯ ಜಮೀನು ದಾರಿ ಸಮಸ್ಯೆ ಇತ್ಯರ್ಥ

Tehsildar Office, Talikote, Farmers Aho Night Dharna, Patepur PT Village, Encroachment Clearance, Land Road,
ತಾಳಿಕೋಟೆ ತಾಲೂಕಿನ ಪತ್ತೇಪೂರ ಪಿಟಿ ಗ್ರಾಮದ ರೈತರ ಜಮೀನುಗಳಿಗೆ ಹೋಗಲು ಜೆಸಿಬಿ ಯಂತ್ರದ ಅತಿಕ್ರಮಣ ತೆರವು ಮಾಡಲಾಯಿತು. ತಹಸೀಲ್ದಾರ್ ಕೀರ್ತಿ ಚಾಲಕ ಇತರರಿದ್ದರು.
Published on

ತಾಳಿಕೋಟೆ: ತಾಲೂಕಿನ ಪತ್ತೇಪೂರ ಪಿಟಿ ಗ್ರಾಮದ ವ್ಯಾಪ್ತಿಯ ರೈತರ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ನಡೆದಿದ್ದ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಬುಧವಾರ ಅಂತ್ಯವಾಗಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.

ತಹಸೀಲ್ದಾರ್ ಕೀರ್ತಿ ಚಾಲಕ ಅವರು, ಧರಣಿ ಸ್ಥಳಕ್ಕೆ ಆಗಮಿಸಿ ಕೂಡಲೇ ದಾರಿ ಮಾಡಿ ಕೊಡಲು ಪ್ರಾರಂಭಿಸಲಾಗುವುದು. ಧರಣಿ ಕೈಬಿಡುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಹಾಗೂ ದಾರಿ ಮಾಡಿಕೊಡಲು ಪ್ರಾರಂಭಿಸಿದ ಕಾರಣ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಿಂಪಡೆಯಲಾಯಿತು. ಅಂದು ಮಧ್ಯಾಹ್ನ 3 ಗಂಟೆಗೆ ಪೊಲೀಸ್ ಬಂದೋಬಸ್ತ್‌ನಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ದಾರಿ ಮಾಡಿ ಕೊಡುವ ಕಾರ್ಯ ನಡೆಯಿತು ಎಂದರು.

ಧರಣಿ ಸಂದರ್ಭದಲ್ಲಿ ಸಹಕಾರ ನೀಡಿದ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಧನ್ಯವಾದಗಳು ಎಂದರು.
ರೈತ ಸಂಘದ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ದ್ಯಾಮನಗೌಡ ಹಾದಿಮನಿ, ಶ್ರೀನಿವಾಸ ಗೊಟಗುಣಕಿ, ಮಲ್ಲನಗೌಡ ದೇವರಡ್ಡಿ, ತಾಲೂಕು ಉಪಾಧ್ಯಕ್ಷ ಶಿವಯೋಗಿ ಗೊಟಗುಣಕಿ, ಮಲ್ಲಣ್ಣ ಸಿಂಗನಳ್ಳಿ, ಮಡಿವಾಳವ್ವ ಮಾರಲಭಾವಿ, ಲಕ್ಷ್ಮೀಬಾಯಿ ಗೊಟಗುಣಕಿ, ಗಂಗಮ್ಮ ಸಿಂಗನಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net