ಪತಿಯನ್ನೇ ಕೊಂದಿದ್ದ ಪತ್ನಿಗೆ ಜೀವಾವಧಿ ಶಿಕ್ಷೆ

Published on

ತುಮಕೂರು: ಅಕ್ರಮ ಸಂಬಂಧ ಬಯಲಾಯಿತೆಂದು ಪ್ರಿಯಕರನ ಜತೆ ಸೇರಿ ಪತಿಯನ್ನೇ ಕೊಂದಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಜೀವಾವಧಿ ಶಿೆ ವಿಧಿಸಿ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಮೂರು ವರ್ಷದ ಹಿಂದೆ ನಗರದ ಗೋಕುಲ ಬಡಾವಣೆಯಲ್ಲಿ ನಡೆದಿದ್ದ ಜಿ.ನಾರಾಯಣ್​ ಕೊಲೆ ಪ್ರಕರಣ ವಿಚಾರಣೆ ನಡೆಸಿದ್ದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಚ್​.ಅನಂತ್​ ಬುಧವಾರ ಪ್ರಕರಣದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾರಾಯಣ್​ ಪತ್ನಿ ಅನ್ನಪೂರ್ಣ ಮತ್ತು ಆಕೆಯ ಪ್ರಿಯಕರ ರಾಮಕೃಷ್ಣನಿಗೆ ಜೀವಾವಧಿ ಶಿೆ ಹಾಗೂ 30 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ವಿ.ಎ.ಕವಿತಾ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ: 2021 ಸೆ.12ರಂದು ಗೋಕುಲ ಬಡಾವಣೆ ಮನೆಯಲ್ಲಿ ಕುಳಿತಿದ್ದಾಗಲೇ ಪತಿ ನಾರಾಯಣ್​ನನ್ನು ಪತ್ನಿ ಅನ್ನಪೂರ್ಣ ಪೆಟ್ರೋಲ್​ ಸುರಿದು ಬೆಂಕಿ ಇಟ್ಟು ಕೊಲ್ಲಲು ಯತ್ನಿಸಿದ್ದಳು. ಈ ವೇಳೆ ಬೆಂಕಿ ಉರಿ ತಾಳಲಾರದೆ ಜೀವ ಉಳಿಸಿಕೊಳ್ಳಲು ಮನೆಯಿಂದ ಹೊರಗಡೆ ಓಡಿಬಂದಿದ್ದ ನಾರಾಯಣ್​ ಮಂಭಾಗದ ಮೋರಿಗೆ ಬಿದ್ದಿದ್ದ. ಈ ವೇಳೆ ಮನೆಯಲ್ಲೇ ಇದ್ದ ಆಕೆಯ ಪ್ರಿಯಕರ ರಾಮಕೃಷ್ಣ ಹಿಂಬಾಲಿಸಿಕೊಂಡು ಬಂದು ತಲೆ ಮೇಲೆ ಕಲ್ಲು ಎತ್ತುಹಾಕಿದ್ದ. ಜಯನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖಾಧಿಕಾರಿಯಾಗಿದ್ದ ತಿಲಕ್​ ಪಾರ್ಕ್​ ಠಾಣೆ ಸಿಪಿಐ ಮುನಿರಾಜು ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net