ಪತಿಯ ಸ್ನೇಹಿತನೊಂದಿಗೆ ಪತ್ನಿ ಪರಾರಿ

Published on

ಗುಬ್ಬಿ: ಸ್ನೇಹಿತನ ಜತೆ ಪತ್ನಿ ಪರಾರಿಯಾದಳೆಂದು ಮನನೊಂದ ಪತಿ ಸೆಲ್ಪಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಟ್ಟಣದ ಗಟ್ಟಿ ಲೇಔಟ್​ನ ನಿವಾಸಿ ನಾಗೇಶ್​ (35) ಮೃತ. 12 ವರ್ಷದ ಹಿಂದೆ ರಂಜಿತಾ ಎಂಬಾಕೆಯನ್ನು ನಾಗೇಶ್​ ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಇತ್ತೀಚೆಗೆ ಸ್ವತ@ ಮನೆ ಮಾರಾಟ ಮಾಡಿ, ತನ್ನ ಎರಡು ಮಕ್ಕಳು ಹಾಗೂ ಪತ್ನಿ ಜತೆ ಗಟ್ಟಿ ಲೇಔಟ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಈ ಸಮಯದಲ್ಲಿ ರಂಜಿತಾಗೆ ನಾಗೇಶ್​ ಸ್ನೇಹಿತ ಭರತ್​ ಎಂಬುವವನ ಪರಿಚಯವಾಗಿದೆ. ಈ ಪರಿಚಯ ಪ್ರೀತಿಗೆ ತಿರುಗಿದ್ದು, ಇತ್ತೀಚೆಗೆ ರಂಜಿತಾ ಇಬ್ಬರು ಮಕ್ಕಳನ್ನು ಬಿಟ್ಟು ಭರತ್​ ಜತೆ ಓಡಿಹೋಗಿದ್ದಾಳೆ ಎನ್ನಲಾಗಿದೆ.

ಇದರಿಂದ ಮನನೊಂದು ನಾಗೇಶ್​ ಸೆಲ್ಪಿ ವಿಡಿಯೋ ಮಾಡಿಟ್ಟು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಸಾವಿಗೆ ಪತ್ನಿ ರಂಜಿತಾ ಹಾಗೂ ಸ್ನೇಹಿತ ಭರತ್​ ಕಾರಣ ಎಂದು ಆರೋಪಿಸಿದ್ದು, ನನಗೆ ನ್ಯಾಯ ಕೊಡಿಸಿ ಎಂದು ಸೆಲ್ಪಿ ವಿಡಿಯೋ ಮಾಡಿ ಫೇಸ್​ ಬುಕ್​ಗೆ ಅಪ್ಲೋಡ್​ ಮಾಡಿದ್ದಾನೆ. ಮಕ್ಕಳು ಅನಾಥರಾಗಿದ್ದಾರೆ. ಸ್ಥಳಕ್ಕೆ ಗುಬ್ಬಿ ಪೊಲೀಸರು

ಭೇಟಿ ಮಾಡಿ ಪರಿಶೀಲಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net