

ಮೈಸೂರು: ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಭಾವನಾ (24) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.
ಮೃತ ಭಾವನಾ ಒಂದು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರಣ್ಯಪುರಂ ನಿವಾಸಿ ಅಜಯ್ ಕುಮಾರ್ ಜತೆ ವಿವಾಹವಾಗಿದ್ದರು. ಆದರೆ ಪತಿ ಅಜಯ್ ಕುಮಾರ್ ಮತ್ತೊಂದು ಯುವತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದನಲ್ಲದೆ, ಫೋಟೋಗಳು ಮೊಬೈಲ್‌ನಲ್ಲಿದ್ದವು. ಆಕೆಯ ಜೊತೆ ಅಶ್ಲೀಲವಾಗಿ ಇದ್ದಂತಹ ಫೋಟೋವನ್ನು ಭಾವನಾ ನೋಡಿದ್ದಳು. ಪತಿಯ ಅಕ್ರಮ ಸಂಬಂಧದ ಬಗ್ಗೆ ಎರಡು ಕುಟುಂಬದವರಿಗೂ ಗೊತ್ತಾಗಿ, ಕೊನೆಗೆ ಎಲ್ಲರೂ ಮಾತನಾಡಿ ಮತ್ತೆ ರಾಜಿ ಮಾಡಿಸಿದ್ದರು. ಆದರೂ ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಭಾವನಾ ಆನಂದ ನಗರದ ಅಪ್ಪನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅಜಯ್ ತಂದೆ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.