ಪತ್ರಿಕಾ ವಿತರಕರ ಕಾಯಕ ಶ್ಲಾಘನೀಯ

patrika din
ಇಳಕಲ್ಲದ ಬಸ್ ನಿಲ್ದಾಣದಲ್ಲಿ ಪತ್ರಿಕಾ ವಿತರಕರು ಪತ್ರಿಕಾ ದಿನ ಆಚರಿಸಿದರು. ಪತ್ರಿಕಾ ಏಜೆಂಟರಾದ ಇಮಾಮಹುಸೇನ್ ಮುಲ್ಲಾ, ಶರಣಪ್ಪ ನಂದ್ಯಾಳ, ಸುರೇಶ ಭಾವಿ, ಶೇಖರಯ್ಯ ಹಿರೇಮಠ, ಪ್ರಜ್ವಲ್ ಗಾಣಿಗೇರ ಇದ್ದರು.
Published on

ಇಳಕಲ್ಲ.(ಗ್ರಾ): ನಗರದ ಬಸ್ ನಿಲ್ದಾಣದಲ್ಲಿ ಪತ್ರಿಕಾ ವಿತರಕರು ಪತ್ರಿಕೆಗಳನ್ನು ಪ್ರದರ್ಶಿಸಿ ಪತ್ರಿಕಾ ದಿನ ಆಚರಿಸಿದರು.

ಹೋಟೆಲ್ ಮಾಲೀಕ ರವಿ ಶೆಟ್ಟಿ ಆಗಮಿಸಿ ಮಾತನಾಡಿ, ಮಳೆ, ಬಿಸಿಲು, ಚಳಿ ಎನ್ನದೇ ಜನತೆಯ ಮನೆ ಮನಗಳಿಗೆ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರ ಕಾಯಕ ಶ್ಲಾಘನೀಯವಾಗಿದೆ ಎಂದರು.

ಪತ್ರಕರ್ತ ಬಿ. ಬಾಬು, ಗುರು ಗಾಣಿಗೇರ, ವಿತರಕರಾದ ಇಮಾಮಹುಸೇನ್ ಮುಲ್ಲಾ, ಶರಣಪ್ಪ ನಂದ್ಯಾಳ, ಸುರೇಶ ಭಾವಿ, ಶೇಖರಯ್ಯ ಹಿರೇಮಠ, ಪ್ರಜ್ವಲ್ ಗಾಣಿಗೇರ, ಮುತ್ತು ಮಡ್ಡಿಕಾರ ಇತರರಿದ್ದರು.

ಪತ್ರಿಕೆಗಳನ್ನು ಹಂಚುವ ಯುವಕರಿಗೆ ಮತ್ತು ಹಿರಿಯರನ್ನು ಸರ್ಕಾರ ಗುರುತಿಸಿ ಅವರಿಗೆ ಕಾನೂನಿನ ಚೌಕಟ್ಟಿನಲ್ಲಿ ಕಾರ್ಮಿಕ ಭದ್ರತೆ ನೀಡಲಿ.

-ಬಸವರಾಜ ಗೊರಬಾಳ, ಹಿರಿಯ ಪತ್ರಿಕಾ ವಿತರಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net