ಪತಂಜಲಿ ಸಮಿತಿಯಿಂದ ಯೋಗ ಜಾಥಾ

20bdvt2 (1)
ಭದ್ರಾವತಿಯಲ್ಲಿ ಪತಂಜಲಿ ಯೋಗ ಸಮಿತಿಯಿಂದ ಯೋಗ ಜಾಥಾ ನಡೆಸಲಾಯಿತು. ಅನ್ನಪೂರ್ಣಾ ಸತೀಶ್, ಡಾ. ವೀಣಾ ಭಟ್, ಮುಂಜೀರಾ ಕೌಸರ್, ಶಿವಲಿಂಗೇಗೌಡ ಇತರರಿದ್ದರು.
Published on

ಭದ್ರಾವತಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಪತಂಜಲಿ ಯೋಗ ಸಮಿತಿ ಹಾಗೂ ಮಹಿಳಾ ಪತಂಜಲಿ ಯೋಗ ಸಮಿತಿಯಿಂದ ಶುಕ್ರವಾರ ಯೋಗ ಜಾಥಾ ನಡೆಸಲಾಯಿತು.

ಹಳೇ ನಗರದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜ್‌ಕುಮಾರ್ ಹಾಗೂ ಉಪ ತಹಸೀಲ್ದಾರ್ ಪ್ರಶಾಂತ್ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾವು ತಾಲೂಕು ಕಚೇರಿ ರಸ್ತೆ, ರಂಗಪ್ಪ ಸರ್ಕಲ್, ಸಿಎನ್ ರಸ್ತೆ, ಮಾಧವಾಚಾರ್ ಸರ್ಕಲ್, ಬಿ.ಎಚ್.ರಸ್ತೆ, ಹಾಲಪ್ಪ ಸರ್ಕಲ್, ಅಂಡರ್ ಬ್ರಿಡ್ಜ್, ಅಂಬೇಡ್ಕರ್ ಸರ್ಕಲ್ ಮೂಲಕ ಮುಖ್ಯ ಬಸ್ ನಿಲ್ದಾಣದವರೆಗೂ ಸಾಗಿತು.

ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷೆ ಅನ್ನಪೂರ್ಣಾ ಸತೀಶ್, ಜಿಲ್ಲಾ ಸಂರಕ್ಷಕ್ ಡಾ. ವೀಣಾ ಭಟ್, ದೈಹಿಕ ಶಿಕ್ಷಣ ಅಕಾರಿ ಮುಂಜೀರಾ ಕೌಸರ್, ಶಿವಲಿಂಗೇಗೌಡ, ವಿಎಚ್‌ಪಿ ಪ್ರಮುಖ ಹಾ.ರಾಮಪ್ಪ, ಜಂಗಮಪ್ಪ, ರವಿ, ಎನ್.ಎಸ್.ಮಹೇಶ್ವರಪ್ಪ, ಶಾರದಾ, ವಾಣಿಶ್ರೀ, ಕೋಕಿಲಾ, ರೂಪಾ, ಲತಾ, ಕವಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net