

ಚಿತ್ರದುರ್ಗ: ನಗರದ ಧರ್ಮಶಾಲಾ ರಸ್ತೆಯ ಪತಂಜಲಿ ಆಸ್ಪತ್ರೆಯಲ್ಲಿ ಮೇ. 23ರಂದು ಬೆಳಗ್ಗೆ 11ರಿಂದ ಸಂಜೆ 4ರವರೆಗೂ ಬೆಂಗಳೂರಿನ ಅಸ್ಟರ್ ಆರ್.ವಿ.ಆಸ್ಪತ್ರೆಯ ಕೀಲು ಮತ್ತು ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ.ಜಿ.ಎನ್.ಹರ್ಷ ಅವರು ರೋಗಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಸೊಂಟ, ಮೊಣಕಾಲು, ಸಂಧಿವಾತ, ಕೀಲು ನೋವು, ವಿಫಲವಾದ ಸಂಕೀರ್ಣಗೊಂಡ ಮತ್ತು ಕೀಲು ರಂಧ್ರದ ಮೂಳೆಗಳ ಶಸ್ತ್ರಚಿಕಿತ್ಸೆ, ವಯಸ್ಸಾದವರಿಗೆ ಕೀಲುಗಳ ಮರು ಜೋಡಣೆ ಸಂಬಂಧ ಸಮಾಲೋಚನೆ ನಡೆಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ 9900787760, 9686356699, ದೂರವಾಣಿ 08194221346ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.