ಪಣ್ಯದಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಲಾಭ

22 Raju 5
ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ ಮಾತನಾಡಿದರು. ಸಂತೋಷ್, ದೀಪಾ ಸಂತೋಷ್, ಎಚ್.ಎಸ್.ಬಸವರಾಜು, ಸದಾಶಿವಮೂರ್ತಿ, ಶಿವಮಾದಪ್ಪ ಮತ್ತು ಇತರರು ಇದ್ದರು.
Published on

ಚಾಮರಾಜನಗರ: ಪಣ್ಯದಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 4,07,662 ರೂ. ಲಾಭ ಬಂದಿದೆ ಎಂದು ಸಂಘದ ಅಧ್ಯಕ್ಷ ಸಂತೋಷ್ ತಿಳಿಸಿದರು.

ತಾಲೂಕಿನ ಪಣ್ಯದಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2021-2022ರ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, ರೈತರು ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಸಂಘಕ್ಕೆ ಹೆಚ್ಚು ಲಾಭ ಬರುತ್ತದೆ ಎಂದರು.

ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ (ಚಾಮುಲ್) ಅಧ್ಯಕ್ಷ ವೈ.ಸಿ.ನಾಗೇಂದ್ರ ಮಾತನಾಡಿ, ಉತ್ಪಾದಕರು ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಚಾಮುಲ್ ನಿರ್ದೇಶಕರಾದ ಎಚ್.ಎಸ್.ಬಸವರಾಜು, ಸದಾಶಿವಮೂರ್ತಿ ಸಭೆಯನ್ನು ಉದ್ಘಾಟಿಸಿದರು. ಹೆಗ್ಗೋಠಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾ ಸಂತೋಷ್, ಸಂಘದ ಉಪಾಧ್ಯಕ್ಷ ಕೆ.ಶಿವರಾಮು, ಚಾಮುಲ್ ಸಹಾಯಕ ವ್ಯವಸ್ಥಾಪಕ ಡಿ.ಸೋಮಣ್ಣ, ವಿಸ್ತರಣಾಧಿಕಾರಿ ದಯಾನಂದ್, ನಿರ್ದೇಶಕರು, ಕಾರ್ಯದರ್ಶಿ, ಸಿಬ್ಬಂದಿ, ಉತ್ಪಾದಕರು ಮತ್ತು ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net