ಪಡಿತರ ವಿತರಣೆಯಲ್ಲಿ ಬಿಜೆಪಿ ಚಿಹ್ನೆ ಬಳಕೆ, ಜಿಗಣಿ ವ್ಯವಸಾಯ ಸೇವಾ ಸಹಕಾರ ಸಂಘದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

33
Published on

ಆನೇಕಲ್: ಜಿಗಣಿಯ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ಚಿಹ್ನೆ ಬಳಸುತ್ತಿರುವುದನ್ನು ಖಂಡಿಸಿ ಜಿಗಣಿಯಲ್ಲಿ ಬುಧವಾರ ಕಾಂಗ್ರೆಸ್ ಮುಖಂಡರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಪಕ್ಷದ ಚಿಹ್ನೆ ಬಳಸಿ ಸಾರ್ವಜನಿಕರಿಗೆ ಪಡಿತರ ನೀಡುತ್ತಿದ್ದ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.

ಕೇಂದ್ರ ಸರ್ಕಾರದ ಯೋಜನೆಯಾದರೆ ಮೋದಿ ೆಟೋ ಹಾಕಲಿ. ಆದರೆ ಪಕ್ಷದ ಚಿಹ್ನೆ ಬಳಸಿ ಪಡಿತರ ನೀಡುತ್ತಿರುವುದು ಸರಿಯಲ್ಲ ಎಂದು ಹೋರಾಟಗಾರರು ಕಿಡಿಕಾರಿದರು.

ಜಿಗಣಿ ಪುರಸಭಾ ಸದಸ್ಯ ಆನಂದ್‌ಗೌಡ ಮಾತನಾಡಿ, ಅಭಿವೃದ್ಧಿ ಕೈಗೊಳ್ಳುವಲ್ಲಿ ವಿಲವಾದ ಬಿಜೆಪಿಯವರು ಹತಾಶರಾಗಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಿಜೆಪಿಯಿಂದ ಕೊಟ್ಟಿದ್ದೇವೆ ಎಂದು ಬಿಂಬಿಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದರು.

ವ್ಯವಸಾಯ ಸೇವಾ ಸಹಕಾರ ಸಂಘದ ಅಧಿಕಾರಿಗಳು ಈ ಬಗ್ಗೆ ಕ್ಷಮೆಯಾಚಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ತಪ್ಪು ನಡೆದರೆ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದರು.

ಪುರಸಭಾ ಸದಸ್ಯ ವಿನೋದ್ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ಕೆಲಸವನ್ನು ಪಕ್ಷಾತೀತವಾಗಿ ಜನಪ್ರತಿನಿಧಿಗಳು ಮಾಡಬೇಕು. ಆದರೆ ಸರ್ಕಾರದ ಯೋಜನೆಗಳನ್ನು ನಾವೇ ಕೊಡುತ್ತೇವೆ ಎನ್ನುವ ರೀತಿಯಲ್ಲಿ ಬಿಂಬಿಸಿಕೊಳ್ಳುವುದು ಕಾನೂನುಬಾಹಿರ ಎಂದು ಹೇಳಿದರು.

ಇದು ನಮ್ಮ ಕಣ್ತಪ್ಪಿನಿಂದ ನಡೆದಿದ್ದು, ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವುದಾಗಿ ಜಿಗಣಿ ವಿಎಸ್ಸೆಸ್ಸೆನ್ ವ್ಯವಸ್ಥಾಪಕ ನಾಗರಾಜ್, ಕಾಂಗ್ರೆಸ್ ಮುಖಂಡರಲ್ಲಿ ಕ್ಷಮೆಯಾಚಿಸಿದರು.

ಪುರಸಭೆ ಸದಸ್ಯರಾದ ಜಿ.ಮಧು, ಫ್ಯಾನ್ಸಿ ರಮೇಶ್, ಕ್ಯಾಲಸನಹಳ್ಳಿ ರಾಜಪ್ಪ, ಅಮುದ ಮಂಜುನಾಥ್,ವಿ.ಹರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net