ಪಡಿತರ ಬಿಡುಗಡೆಗೊಳಿಸದ ಕ್ರಮ ಸರಿಯೇ ?

Pressmeet
Published on

ಚಿತ್ರದುರ್ಗ: ಮಾತೃಶ್ರೀ ಮಹಿಳಾ ಸಹಕಾರ ಸಂಘಕ್ಕೆ ನ್ಯಾಯಬೆಲೆ ಅಂಗಡಿ ಮಂಜೂರಾಗಿ ಆರು ತಿಂಗಳು ಕಳೆದಿದೆ. ಆದರೆ, ಪಡಿತರ ಬಿಡುಗಡೆಗೊಳಿಸದೆ ಮಂಜೂರಾತಿ ರದ್ದುಗೊಳಿಸುವುದಾಗಿ ಆಹಾರ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದು, ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಸಂಘದ ಎಚ್.ಕೆ.ಮಮತಾ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಜೂರು ಬಳಿಕ ಲಾಗಿನ್ ನೀಡಿದ್ದು, 223 ಕಾರ್ಡ್‌ಗಳನ್ನು ಹಾಕಿದ್ದಾರೆ. ಆದರೆ, ಅರ್ಹರಿಗೆ ವಿತರಿಸಲು ಆಹಾರಧಾನ್ಯ ನೀಡದಿರುವ ಕ್ರಮ ಎಷ್ಟು ಸರಿ ಎಂದು ಪ್ರಶ್ನಿಸಿದರು.

ಪಿ.ಲಕ್ಷ್ಮಿದೇವಿ, ಎಂ.ಗೀತಾ, ವಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net