ಪಡಿತರ ಚೀಟಿದಾರರಿಗೆ ಏಪ್ರಿಲ್ ಆಹಾರ ಧಾನ್ಯ ವಿತರಣೆ

Published on

ಚಾಮರಾಜನಗರ: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಾಗಿ ನೀಡಲಾಗುತ್ತಿದ್ದ ಹಣದ ಬದಲು ಫೆಬ್ರವರಿ ಮಾಹೆಯಿಂದಲೇ ಅನ್ವಯವಾಗುವಂತೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ ಎಂದು ಆಹಾರ ಇಲಾಖೆ ತಿಳಿಸಿದೆ.

ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿಯ ಅಕ್ಕಿ ಬದಲಾಗಿ ಪ್ರತಿ ಕೆಜಿಗೆ 34 ರೂ ರಂತೆ ಪ್ರತಿ ಸದಸ್ಯರಿಗೆ 170 ರೂ. ಗಳನ್ನು 2023ರ ಜುಲೈ ಮಾಹೆಯಿಂದ ಜನವರಿ 2025ರ ಮಾಹೆಗೆ ಪ್ರತಿ ತಿಂಗಳು ಡಿಬಿಟಿ ಮೂಲಕ ಹಣ ಜಮೆ ಮಾಡಲಾಗುತ್ತಿತ್ತು. ಪ್ರಸ್ತುತ ಫೆಬ್ರವರಿ 2025ರ ಮಾಹೆಯಿಂದಲೇ ಡಿಬಿಟಿ ಹಣದ ಬದಲಾಗಿ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ.

ಏಪ್ರಿಲ್‌ನಲ್ಲಿ ಅಂತ್ಯೋದಯ ಪಡಿತರ ಚೀಟಿದಾರರ ಒಂದರಿಂದ ಮೂವರು ಸದಸ್ಯರಿರುವ ಕುಟುಂಬಕ್ಕೆ 35 ಕೆಜಿ ಅಕ್ಕಿ, ನಾಲ್ಕು ಸದಸ್ಯರ ಕುಟುಂಬಕ್ಕೆ 40 ಕೆಜಿ, ಐವರು ಸದಸ್ಯರ ಕುಟುಂಬಕ್ಕೆ 50 ಕೆಜಿ, ಆರು ಸದಸ್ಯರ ಕುಟುಂಬಕ್ಕೆ 60 ಕೆಜಿ, ಏಳು ಸದಸ್ಯರ ಕುಟುಂಬಕ್ಕೆ 70 ಕೆಜಿ, ಎಂಟು ಸದಸ್ಯರ ಕುಟುಂಬಕ್ಕೆ 80 ಕೆಜಿ, ಒಂಭತ್ತು ಸದಸ್ಯರ ಕುಟುಂಬಕ್ಕೆ 90 ಕೆಜಿ, 10 ಸದಸ್ಯರ ಕುಟುಂಬಕ್ಕೆ 100 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ.

ಬಿಪಿಎಲ್ ಪಡಿತರ ಚೀಟಿದಾರ ಕುಟುಂಬಕ್ಕೆ ಓರ್ವ ಸದಸ್ಯರಿಗೆ 10 ಕೆಜಿ ಅಕ್ಕಿ, ಇಬ್ಬರು ಸದಸ್ಯರ ಕುಟುಂಬಕ್ಕೆ 20 ಕೆಜಿ, ಮೂವರು ಸದಸ್ಯರ ಕುಟುಂಬಕ್ಕೆ 30 ಕೆಜಿ, ನಾಲ್ಕು ಸದಸ್ಯರ ಕುಟುಂಬಕ್ಕೆ 40 ಕೆಜಿ, ಐದು ಸದಸ್ಯರ ಕುಟುಂಬಕ್ಕೆ 50 ಕೆಜಿ, ಆರು ಸದಸ್ಯರ ಕುಟುಂಬಕ್ಕೆ 60 ಕೆಜಿ, ಏಳು ಸದಸ್ಯರ ಕುಟುಂಬಕ್ಕೆ 70 ಕೆಜಿ, ಎಂಟು ಸದಸ್ಯರ ಕುಟುಂಬಕ್ಕೆ 80 ಕೆಜಿ, ಒಂಭತ್ತು ಸದಸ್ಯರ ಕುಟುಂಬಕ್ಕೆ 90 ಕೆಜಿ ಹಾಗೂ 10 ಸದಸ್ಯರ ಕುಟುಂಬಕ್ಕೆ 100 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಯೋಗಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net