ಪಡಿತರ ಚೀಟಿದಾರರ ಇ-ಕೆವೈಸಿಗೆ 31ಅಂತಿಮ ಗಡುವು

Ration card
Published on

ಚಿತ್ರದುರ್ಗ:ಪಡಿತರ ಚೀಟಿದಾರರ ಇ-ಕೆವೈಸಿ ಸಂಗ್ರಹಣೆಗೆ ಆ.31 ಅಂತಿಮ ಗಡುವು ನಿಗದಿಪಡಿಸಲಾಗಿದ್ದು,ಪಡಿತರ ಚೀಟಿ ದಾ ರರು ತಪ್ಪದೇ ಇ-ಕೆವೈಸಿ ವಿವರ ಸಲ್ಲಿಸಬೇಕೆಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಕೆ.ಪಿ.ಮಧುಸೂದನ್ ತಿಳಿಸಿದ್ದಾರೆ. ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಚೀಟಿದಾರರ ಇ-ಕೆವೈಸಿ ಸಂಗ್ರಹಿಸಲಾಗುತ್ತದೆ. ಈವರೆಗೂ ಜಿಲ್ಲೆಯಲ್ಲಿ ಅಂತ್ಯೋದಯ ಪಡಿತರ ಚೀಟಿ ಸದಸ್ಯರ ಶೇ.96.34 ಮತ್ತು ಆದ್ಯತಾ ಪಡಿತರ ಚೀಟಿ ಸದಸ್ಯರ ಶೇ.97.18 ಸೇರಿದಂತೆ ಶೇ.97.07 ಇ-ಕೆ.ವೈ.ಸಿ ಸಂಗ್ರಹಿಸಲಾಗಿದೆ. ಪಡಿ ತರ ಚೀಟಿಯಲ್ಲಿನ ಸದಸ್ಯರ ಇ-ಕೆವೈಸಿ ಸಂಗ್ರಹಿಸದಿದ್ದರೆ ಮುಂಬರುವ ದಿನಗಳಲ್ಲಿ ಅಂಥ ಪಡಿತರ ಚೀಟಿಗಳು,ಸದಸ್ಯರ ಹೆಸರುಗಳು ಪಡಿತರ ಚೀಟಿಗಳಿಂದ ಬಿಟ್ಟು ಹೋಗುವ ಮತ್ತು ಆಹಾರಧಾನ್ಯ ಹಂಚಿಕೆ ಸ್ಥಗಿತಗೊಳ್ಳುವ ಸಂಭವವಿದೆ ಎಂದು ಮಧಸೂದನ್ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net