ಪಡಿತರ ಚೀಟಿದಾರ ಬ್ಯಾಂಕ್ ಖಾತೆಗೆ ಡಿಬಿಡಿ ಮೂಲಕ ಹಣ ವರ್ಗಾವಣೆ

rationcard
Published on

ಬೆಳಗಾವಿ: ಜಿಲ್ಲೆಯ ಅರ್ಹ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ, ಸರ್ಕಾರವು ಜುಲೈ 2023 ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಜೊತೆಗೆ ರಾಜ್ಯ ಸರ್ಕಾರ ಘೊಷಣೆ ಮಾಡಿದ ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಯೋಜನೆರಡಿ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ನೀಡುವ ಪ್ರಮುಖ ಯೋಜನೆಯಾಗಿದೆ. ಅದರಲ್ಲಿ ಈಗಾಗಲೇ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಿ ಇನ್ನುಳಿದ 5 ಕೆ.ಜಿ ಅಕ್ಕಿಯ ಬದಲಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಗೆ ಚಾಲನೆ ನೀಡಲಾಗಿದೆ. ಜುಲೈ-2023 ರ ವರಗೆ ಒಟ್ಟು 829001 ಅಂತ್ಯೋದಯ ಅನ್ನಯೋಜನೆ ಮತ್ತು ಪಿ.ಎಚ್.ಎಚ್ ಪಡಿತರಚೀಟಿದಾರರ 28,24,882 ಫಲಾನುಭವಿಗಳಿಗೆ ನಿಯಮಾನುಸಾರರೂ. 46,54,18520 ರೂ.ಗಳನ್ನು ಡಿಬಿಟಿ ಮೂಲಕ ಬ್ಯಾಂಕ್ ಖಾತೆಗಳಿಗೆ ಮೊತ್ತ ಜಮೆ ಮಾಡಲಾಗಿದೆ.
ಫಲಾನುಭವಿಗಳು ಡಿ.ಬಿ.ಟಿ ಯೋಜನೆಯ ಸದುಪಯೋಗ ಪಡೆದುಕೊಂಡಿರುತ್ತಾರೆ. ಅದರಂತೆ, ಅಗಸ್ಟ 2023ನೇ ಮಾಹೆ ಯಲ್ಲಿ ಆಹಾರ ಇಲಾಖೆಯ ತಂತ್ರಾಂಶದ ಪ್ರಕಾರ ಅರ್ಹ ಎ.ಎ.ವಾಯ್ ಮತ್ತು ಪಿ.ಎಚ್.ಎಚ್ ಪಡಿತರ ಚೀಟಿದಾರರ ಒಟ್ಟು 8,97,747 ಕುಟುಂಬದ ಮುಖ್ಯಸ್ಥರ ಬ್ಯಾಂಕ್‌ಖಾತೆಗೆ ಆಃಖಿ ಮೂಲಕ 50,67,49,260 ಮೊತ್ತವನ್ನು ವರ್ಗಾಯಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ತಿಂಗಳಾಂತ್ಯಕ್ಕೆ ಒಟ್ಟು 30,73,726 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮೊತ್ತ ಜಮೆಯಾಗಲಿದೆ, ಜಿಲ್ಲೆಯಲ್ಲಿನ ಎಲ್ಲ ಫಲಾನುಭವಿಗಳು ಇದರ ಸದುಪಯೋಗ ಪಡದುಕೊಳ್ಳಲು ಸೂಚಿಸಿದೆ. ನೇರ ನಗದು ವರ್ಗಾವಣೆಗೆ ಫಲಾನುಭವಿಗಳು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ,ಮೊಬೈಲ್ ಸಂಖ್ಯೆ ಜೋಡಣೆಯಾಗಿರಬೇಕು. ಆ ಬ್ಯಾಂಕ್ ಖಾತೆಯು ಸಕ್ರೀಯ ಬ್ಯಾಂಕ್ ಖಾತೆಯಾಗಿರಬೇಕು, ಫಲಾನುಭವಿಯು ಕಳೆದ 3 ತಿಂಗಳಲ್ಲಿ ಒಂದು ಸಲ ಆದರೂ ನ್ಯಾಯ ಬೆಲೆ ಅಂಗಡಿಯಲ್ಲಿ ಬಯೋ ನೀಡಿ ಪಡಿತರ ಪಡೆದಿರಬೇಕು. ಡಿಬಿಡಿ ಮೂಲಕ ಹಣ ವರ್ಗಾವಣೆಯಾದ ಬಗ್ಗೆ ಅವರ ಮೊಬೈಲ್‌ಗೆ ಸಂದೇಶ ರವಾನೆ ಆಗಲಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net