

ಚಿಕ್ಕಮಗಳೂರು: ಪಡಿತರ ಚೀಟಿಗಳಲ್ಲಿರುವ ಗೊಂದಲಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಸುಗಮವಾಗಿ ಪಡಿತರ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಕಾಂಗ್ರೆಸ್ ಮುಖಂಡರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಕೆ.ಭರತ್, ಬಿಪಿಎಲ್ ಪಡಿತರ ಚೀಟಿದಾರರಿಗೆ ನಾನಾ ರೀತಿಯ ಗೊಂದಲಗಳು ಉಂಟಾಗುತ್ತಿವೆ. ಅಧಿಕಾರಿಗಳು ದಿನಕ್ಕೊಂದು ಇಲ್ಲಸಲ್ಲದ ದಾಖಲೆಗಳು, ಮಾನದಂಡಗಳನ್ನು ಘೋಷಿಸುತ್ತಿದ್ದು ಈ ಸಮಸ್ಯೆಯನ್ನು ಬಿಪಿಎಲ್‌ನ ನೈಜ ಫಲಾನುಭವಿಗಳು ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಇತ್ತೀಚೆಗೆ ಮೂರು ಎಕರೆ ಭೂಮಿ ಹಾಗೂ ನಾಲ್ಕು ಚಕ್ರ ವಾಹನ ಹೊಂದಿರುವರು, ಸಾವಿರ ಚದರಡಿಕ್ಕಿಂತ ಮೇಲ್ಪಟ್ಟ ಮನೆ ನಿರ್ಮಿಸಿರುವವರು ಫಲಾನುಭವಿಗಳಾಗಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಈ ವಿರುದ್ಧ ಆಹಾರ ಮಂತ್ರಿಗಳು ಯಾವುದೇ ಸಮಸ್ಯೆಗಳು ಉದ್ಬವಿಸುವುದಿಲ್ಲ ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಸ್ಥಳೀಯವಾಗಿ ಜನ ಆತಂಕದಲ್ಲೇ ಇದ್ದಾರೆ ಎಂದು ಹೇಳಿದರು.
ಸಾವಿರ ಚದರಡಿ ಮನೆ ನಿರ್ಮಿಸಿಕೊಳ್ಳಲು ೩.೫ ಲಕ್ಷ ರೂ. ವ್ಯಯಿಸಬೇಕು. ಅಲ್ಲದೇ ಇಪ್ಪತ್ತು ವರ್ಷಗಳ ಹಿಂದಿನ ಕಾರುಗಳು ೧ ರಿಂದ ೨ ಲಕ್ಷದ ಒಳಗೆ ಲಭ್ಯವಾಗಲಿದೆ. ಈ ಮಾನದಂಡಗಳನ್ನೇ ಅನುಸರಿ ಕೊಂಡು ಈ ಸೌಲಭ್ಯ ಹೊಂದಿರುವ ಕುಟುಂಬಕ್ಕೆ ಬಿಪಿಎಲ್ ಪಡಿತರ ಚೀಟಿ ನೀಡಲು ಸಾಧ್ಯವಿಲ್ಲ ಎಂದು ಹೇಳಿರುವುದು ವಿಪರ್ಯಾಸ ಎಂದು ತಿಳಿಸಿದರು.
ಪ್ರಸ್ತುತ ಸಮಾಜದಲ್ಲಿ ಅನೇಕ ಉದ್ಯೋಗದಲ್ಲಿರುವ ನಿವಾಸಿಗಳು ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವುದು ಸಹಜ. ಇವರುಗಳನ್ನು ಕೂಡಾ ಶ್ರೀಮಂತರ ಪಟ್ಟಿಗೆ ಸೇರ್ಪಡಿಸಿ ಪರಿಗಣಿಸುವುದು ಸರಿಯಲ್ಲ. ಕೃಷಿ ಜಮೀನು ಅಭಿವೃದ್ದಿಪಡಿಸಲು ಸಾಲಸೋಲ ಮಾಡಿಕೊಂಡು ಟ್ರಾö್ಯಕ್ಟರ್ ಖರೀದಿಸುವವರು ಉಳ್ಳವರಾಗುತ್ತಾರೆಯೇ ಎಂದು ಪ್ರಶ್ನಿಸಿದರು.