ಪಡಿತರ ಅಕ್ಕಿ ಜಪ್ತಿ, ನಾಲ್ವರ ಬಂಧನ

Capture
Published on

ಔರಾದ್: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಗುಜರಾತ್ ರಾಜ್ಯಕ್ಕೆ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಿರುವ ಔರಾದ್ ಪೊಲೀಸರು, 9.97 ಲಕ್ಷ ರೂ. ಮೌಲ್ಯದ ಅಕ್ಕಿ ಹಾಗೂ ಲಾರಿ ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತಂಡ, ಪಟ್ಟಣದ ಎಪಿಎಂಸಿ ಯಾಡರ್್ನಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿರುವ 688 ಬ್ಯಾಗ್(344 ಕ್ವಿಂಟಾಲ್) ಅಕ್ಕಿ ಜಪ್ತಿ ಮಾಡಿದೆ. ಗುಜರಾತ್ ಪೋರ್ಬಂದರಿನ ಬಾರಾವ್ಹಾನ್ ಗ್ರಾಮದ ದೇವಾಯತ್ (30), ಪ್ರಕಾಶ (41), ಮಚೀಂದ್ರ ಸ್ವಾಮಿ (41), ಕರ್ಮನ್ ಭಾಯಿ ಅವರನ್ನು ಬಂಧಿಸಲಾಗಿದೆ. ದಾಳಿಯಲ್ಲಿ ಆಹಾರ ನಿರೀಕ್ಷಕ ಶಿವಾನಂದ ಪಾಟೀಲ್, ಸಿಪಿಐ ಮಲ್ಲಿಕಾಜರ್ುನ ಇಕ್ಕಳಗಿ, ಗ್ರಾಮ ಲೆಕ್ಕಿಗರಾದ ಲಕ್ಷ್ಮೀ, ಗೌರಮ್ಮ, ಪೇದೆಗಳಾದ ಸಯ್ಯದ್ ಶಫಿ, ಸಂಜುಕುಮಾರ, ರಾಜಕುಮಾರ, ವಿಲಾಸ್, ಮಹೇಶರೆಡ್ಡಿ ಇದ್ದರು. ಔರಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net