ಪಡಿತರ ಅಕ್ಕಿ ಅಕ್ರಮ ಸಾಗಣೆ, ವಾಹನ ವಶಕ್ಕೆ

25MDG3
Published on

ಮುಂಡರಗಿ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಬುಲೆರೊ ವಾಹನವನ್ನು ಸ್ಥಳೀಯ ಪೊಲೀಸರು ಶನಿವಾರ ಸಂಜೆ ವಶಕ್ಕೆ ಪಡೆದಿದ್ದಾರೆ. 50 ಕೆಜಿ ತೂಕದ 45 ಅಕ್ಕಿ ಚೀಲಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಾಲೂಕಿನ ಬೆಣ್ಣಿಹಳ್ಳಿ-ಕೊರ್ಲಹಳ್ಳಿ ಗ್ರಾಮಗಳ ಮಧ್ಯೆ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಆದರೆ, ಚಾಲಕ ಪರಾರಿಯಾಗಿದ್ದಾನೆ.

ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಚೀಲಗಳ ಒಟ್ಟು ಮೌಲ್ಯ 67,500 ರೂ. ಎಂದು ಅಂದಾಜಿಸಲಾಗಿದೆ. ತಾಲೂಕು ಆಹಾರ ನಿರೀಕ್ಷಕ ಶಿವರಾಜ ಆಲೂರ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net