ಪಡಿಕ್ಕಲ್ ಶತಕ, ಮುನ್ನಡೆ ಸಾಧಿಸಿದ ಕರ್ನಾಟಕ

IMG_20240106_104432
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಶತಕದ ನೆರವಿನಿಂದ ಆತಿಥೇಯ ಕರ್ನಾಟಕ ಇಲ್ಲಿಯ ರಾಜನಗರ ಕೆಎಸ್ ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ‌ ಕ್ರಿಕೆಟ್ ಟೂರ್ನಮೆಂಟ್ ನ‌ ಸಿ ಗುಂಪಿನ ಮೊದಲ ಲೀಗ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.
ಪಂದ್ಯದ ಮೊದಲ‌ ದಿನವಾದ ಶುಕ್ರವಾರ ಔಟಾಗದೇ ಉಳಿದಿದ್ದ ದೇವದತ್ತ ಪಡಿಕ್ಕಲ್ ಇಂದು ಶತಕ ಪೂರೈಸಿದರು. ಬಲ್ತೆಜ್ ಸಿಂಗ್ ಬೌಲಿಂಗ್ ನಲ್ಲಿ ಬೌಂಡರಿ ಬಾರಿಸಿ ಪಡಿಕ್ಕಲ್ ಶತಕ ಸಾಧನೆ ಮಾಡಿದರು. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಪಡಿಕ್ಕಲ್ ಗೆ ೩ನೇ ಶತಕ‌ ಇದಾಗಿದೆ.
ಪಂಜಾಬ್ ಪ್ರಥಮ ಇನ್ನಿಂಗ್ಸ್ ನಲ್ಲಿ‌ 152 ರನ್ ಗೆ ಆಲೌಟ್ ಆಗಿತ್ತು. ಕರ್ನಾಟಕ 3 ವಿಕೆಟ್ ಗೆ 142 ರನ್‌ಗಳಿಸಿತ್ತು. ಪಂದ್ಯದ 2ನೇ ದಿನವಾದ ಶನಿವಾರ ಆಟ ಮುಂದುವರಿಸಿದ ಕರ್ನಾಟಕ 47 ಓವರ್ ಗಳಲ್ಲೊ 3 ವಿಕೆಟ್ ಗೆ 184ರನ್ ಗಳಿಸಿ ಬೃಹತ್ ಮೊತ್ತದತ್ತ ಹೆಜ್ಜೆ ಇಟ್ಟಿದೆ. ದೇವದತ್ತ ಪಡಿಕ್ಕಲ್ 106 ರನ್  ಹಾಗೂ ಮನೀಷ ಪಾಂಡೆ  28ರನ್ ಗಳಿಸಿ ಆಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net