ಪಡಿ ಸಂಗ್ರಹಿಸವ ಮೂಲಕ ಬ್ರಹ್ಮರಥೋತ್ಸವ ಕಾರ್ಯಕ್ಕೆ ಚಾಲನೆ

5 ckm 2
ಚಿಕ್ಕಮಗಳೂರು ಹೊರವಲಯದ ಹಿರೇಮಗಳೂರಿನ ಶ್ರೀ ಕೋದಂಡರಾಮಚAದ್ರ ಸ್ವಾಮಿಯವರ ಬ್ರಹ್ಮರಥೋತ್ಸವದ ಅಂಗವಾಗಿ ಗ್ರಾಮೀಣ ಸೊಡಗಿನಲ್ಲಿ ಜೋಡೆತ್ತುಗಳನ್ನು ಅಲಂಕರಿಸಿ, ಗ್ರಾಮದ ಸುತ್ತಲು ಮೆರವಣಿಗೆ ನಡೆಸಿ ಗ್ರಾಮದೇವತೆಗಳ ಉತ್ಸವ ಕಾರ್ಯವು ಶ್ರದ್ದೆಯಿಂದ ಬುಧವಾರ ನೆರವೇರಿತು. ಹಿರೇಮಗಳೂರು ಕಣ್ಣನ್, ವೈಷ್ಣವ ಸಿಂಹ, ರಂಗನಾಥ, ಹಿರೇಮಗಳೂರು ಪುಟ್ಟಸ್ವಾಮಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಐತಿಹಾಸಿಕ ಪ್ರಸಿದ್ಧ ಹಿರೇಮಗಳೂರು ಶ್ರೀ ಕೋದಂಡರಾಮಚAದ್ರ ಸ್ವಾಮಿಯವರ ಬ್ರಹ್ಮರಥೋತ್ಸವದ ಅಂಗವಾಗಿ ಗ್ರಾಮೀಣ ಸೊಡಗಿನಲ್ಲಿ ಜೋಡೆತ್ತುಗಳನ್ನು ಅಲಂಕರಿಸಿ, ಗ್ರಾಮದ ಸುತ್ತಲು ಮೆರವಣಿಗೆ ನಡೆಸಿ ಗ್ರಾಮದೇವತೆಗಳ ಉತ್ಸವ ಕಾರ್ಯವು ಶ್ರದ್ದೆಯಿಂದ ಬುಧವಾರ ನೆರವೇರಿತು.

ಈ ವೇಳೆ ದೇವಾಲಯದ ಅರ್ಚಕ ಹಿರೇಮಗಳೂರು ಕಣ್ಣನ್ ಮಾತನಾಡಿ, ಮಾರ್ಚ್ ೯ರಂದು ನಡೆಯಲಿರುವ ಬ್ರಹ್ಮ ರಥೋತ್ಸವದ ಪ್ರಯುಕ್ತ ಇಂದು ಪಡಿ ಸಂಗ್ರಹ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಮಾ. ೧೨ರವರೆಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹೋಮ ಹವನಗಳು ಜರುಗಲಿದೆ ಎಂದು ತಿಳಿಸಿದರು.

ಸಂಸ್ಕೃತ ವಿದ್ವಾಂಸ ವೈಷ್ಣವ ಸಿಂಹ ಮಾತನಾಡಿ, ಭಕ್ತಿಯಿಂದ ಶ್ರೀ ಕೋದಂಡರಾಮಚAದ್ರನನ್ನು ನಿಸ್ವಾ ರ್ಥ, ಮುಕ್ತ ಮನಸ್ಸಿನಿಂದ ಆರಾಧಿಸಿ, ಪೂಜಿಸಿದರೆ ಮಾನವ ಇಷ್ಟಾರ್ಥ ಹಾಗೂ ಆಕಾಂಕ್ಷೆಗಳನ್ನು ಈಡೇರಿಸುವನು ಎಂಬ ಪ್ರತೀತಿ ಹಿರೇಮಗಳೂರು ದೇವಾಲಯದಲ್ಲಿದೆ ಎಂದರು.

ಈ ಸಂದರ್ಭದಲ್ಲಿ ದೇವಾಲಯ ಟ್ರಸ್ಟ್ ಖಜಾಂಚಿ ರಂಗನಾಥ, ಸಂಚಾಲಕಿ ರಮಾ ಮೋಹನ್, ಮೂಡಿಗೆರೆಯ ಮಂಚೇಗೌಡ ಕುಟುಂಬ, ನಗರಸಭೆ ಮಾಜಿ ಸದಸ್ಯರಾದ ಹಿರೇಮಗಳೂರು ಪುಟ್ಟಸ್ವಾಮಿ, ಎಚ್.ಎಸ್.ಜಗದೀಶ್, ಗ್ರಾಮಸ್ಥರಾದ ಎಚ್.ಕೆ.ಕೇಶವಮೂರ್ತಿ, ರಾಮಚಂದ್ರ, ಮೋಹನ್, ಬಾಲಾಜಿ, ರಾಜಶೇಖರ್, ಶಿವಾಜಿ, ಸ್ವಾಮಿ, ಸಹ ಅರ್ಚಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net