ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ

2401Klb08
Published on

ಕಲಬುರಗಿ: ಆಧುನಿಕ ಒತ್ತಡದ ಜೀವನದಲ್ಲಿ ಮಕ್ಕಳು ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಅಗತ್ಯ ಎಂದು ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಹೇಳಿದರು.

ನಗರದ ಶ್ರೀ ಶರಣಬಸವೇಶ್ವರ ಅಪ್ಪನೆ ಕೆರೆ ನಿರ್ವಹಣಾ ಪ್ರಾಧಿಕಾರದಿಂದ ಗುರುವಾರದಿಂದ ಆರಂಭವಾದ ಶಿಶಿರೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ನಗರದ ಪ್ರದೇಶದಲ್ಲಿ ಕಾನ್ವೆಂಟ್ ಶಾಲೆಗೆ ಹೋಗುವ ಮಕ್ಕಳು ಪರೀಕ್ಷೆ ಎದುರಿಸಬೇಕು. ಹೆಚ್ಚು ಅಂಕದ ಒತ್ತಡದಲ್ಲಿಯೆ ವಿದ್ಯಾಭ್ಯಾಸ ಮಾಡುತ್ತ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.

ಯುವಕರು ಮೊಬೈಲ್, ಸಾಮಾಜಿಕ ಜಾಲತಾಣದಿಂದ ಹೊರಬಂದು, ಹೊಸ ಹೊಸ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಗಮನ ಸೆಳೆದ ರಂಗೋಲಿ ಚಿತ್ತಾರ:ಸಂಗಮೇಶ್ವರ ಮಹಿಳಾ ಮಂಡಲದ ಅಧ್ಯಕ್ಷೆ ವೈಶಾಲಿ ದೇಶಮುಖ ಹಾಗೂ ಸಂಧ್ಯಾ ಹೊನಗುಂಟಿಕರ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಮಹಿಳೆಯರು ಕೆರೆಯ ಉದ್ಯಾನವನದಲ್ಲಿ ಬಣ್ಣ ಬಣ್ಣದ ರಂಗೋಲಿಯ ಚಿತ್ತಾರ ಬಿಡಿಸಿದ್ದು, ಸಭಿಕರ ಗಮನ ಸೆಳೆಯಿತ್ತು.

ಸಹಾಯಕ ಆಯುಕ್ತೆ ಸಾಹಿತ್ಯ ಅವರು ಸಸಿಗೆ ನೀರೆರೆಯುವ ಮೂಲಕ ಶಿಶಿರೋತ್ಸವ ಸಂಭ್ರಮ-೨೦೨೫ ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಇದ್ದರು. ಪ್ರಾದೇಶಿಕ ಆಯುಕ್ತರ ಕಚೇರಿಯ ತಹಸೀಲ್ದಾರ್ ವೆಂಕಣ್ಣ ಗೌಡ ಸ್ವಾಗತಿಸಿದರು. ಶಶೀಕಲಾ ಜಡೆ ನಿರೂಪಣೆ ಮಾಡಿದರು.

ಸಾಂಸ್ಕೃತಿಕ ಸಮ್ಮಿಲನ...

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲಿಗೆ ತಬಲಾ ಕಲಾವಿದ ರವೀಂದ್ರ ಕುಲ್ಕರ್ಣಿ ನೇತೃತ್ವದ ಹಂಸದ್ವನಿ ತಬಲಾ ಬಳಗದಿಂದ ತಬಲಾ ನಿನಾದ ಮೂಡಿಬಂತು. ಡಾ.ಶುಭಾಂಗಿ ನಿರ್ದೇಶನದಲ್ಲಿ ಓಂಕಾರ ನೃತ್ಯ ಸಾಧನಾ ತಂಡದಿAದ ನೃತ್ಯ ವೈಭವ ಪ್ರದರ್ಶನ ನಡೆಯಿತು. ಕರ್ನಾಟಕ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಾಬುರಾವ ಕೋಬಾಳ ಮತ್ತು ಸಂಗಡಿಗರಿAದ ಜಾನಪದ ಗೀತೆ ಶೋತೃಗಳ ಮನದಣಿಸಿತು. ಲಕ್ಷಿö್ಮÃ ಅರುಣ ಭೀಮಳ್ಳಿ ಸುಮಧುರ ಕಂಠದಿAದ ಗಾಯನ ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net