

ಮಾಂಜರಿ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಸಂಸ್ಥೆ ಅಧ್ಯಕ್ಷ ಡಾ.ಎನ್.ಎ.ಮಗದುಮ್ ಹೇಳಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಶ್ರೀ ಗೊಮಟೇಶ ಶಿಕ್ಷಣ ಸಂಸ್ಥೆಯ ಡಾ.ಎನ್.ಎ.ಮಗದುಮ್ ಸೆಂಟ್ರಲ್ ಪಬ್ಲಿಕ ಸ್ಕೂಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಸಂಘಟನೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಸ್ಥೆ ಕಾರ್ಯದರ್ಶಿ ಸುರೇಶ ಚೌಗುಲಾ ಮಾತನಾಡಿ, ಶಿಕ್ಷಣ ಕ್ಷೇತ್ರದಷ್ಟೇ, ಕ್ರೀಡೆ ಹಾಗೂ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಕ ಸೂರ್ಯಕಾಂತ ಮೋನೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯಲು ವಿವಿಧ ಸಂಘಗಳು ಅತ್ಯವಶ್ಯಕ ಎಂದರು.
ಶಾಲಾ ಚುನಾವಣೆಯಲ್ಲಿ ಶಾಲಾ ಪ್ರತಿನಿಧಿಯಾಗಿ ಆಯ್ಕೆಯಾದ ಟೀನಾ ಜೋಶಿ ಹಾಗೂ ಆದಿರಾಜ ಕೋಲೆ ಅವರನ್ನು ಗೌರವಿಸಿ, ಅಧಿಕಾರ ವಹಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಉಪಪ್ರಾಚಾರ್ಯೆ ವೈಶಾಲಿ ಇಂಗಳೆ, ಶಿಕ್ಷಕರಾದ ಸಂತೋಷ ಚವ್ಹಾಣ, ಶ್ರೀಶೈಲ ಮಾನೆ, ಪಕ್ಕಿರೇಶ ಗೊಂದಿ, ರಾಜು ಕುಂಬಾರ, ರೇಖಾ ಪಾಟೀಲ, ಸುನಂದಾ ಐನಾಪುರೆ ಇತರರಿದ್ದರು. ವಿದ್ಯಾರ್ಥಿನಿ ಖದೀಜಾ ತಾಂಬಟ ಸ್ವಾಗತಿಸಿದರು. ದರ್ಶಿನಿ ಪಾಟೀಲ ವಂದಿಸಿದರು. ನಮ್ರತಾ ಗುಣಕೆ ನಿರೂಪಿಸಿದರು.