ಪಠ್ಯೇತರ ಚಟುವಟಿಕೆಗೆ ಪ್ರತ್ಯೇಕ ಸಿಬ್ಬಂದಿ ಕೊಡಿ

AMARNATH PATIL
Published on

ಕಲಬುರಗಿ: ಶಿಕ್ಷಕರನ್ನು ಇತರ ಚಟುವಟಿಕೆಗಳಿಗೆ ಬಳಸುತ್ತಿರುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಹೀಗಾಗಿ ಪೂರ್ಣ ಪ್ರಮಾಣದ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸಲು ಹೊಸ ಸುತ್ತೋಲೆ ಹೊರಡಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್ ಆಗ್ರಹಿಸಿದರು.
ಕಲಿಕಾ ಚಟುವಟಿಕೆಗಳಿಗಾಗಿ ಶಿಕ್ಷಕರಿಗೆ ಸಮಯ ನಿಗದಿಪಡಿಸಬೇಕು. ಆದರೆ ಮಧ್ಯಾಹ್ನದ ಬಿಸಿಯೂಟ, ಸಮವಸ್ತ, ಪಠ್ಯಪುಸ್ತಕ ವಿತರಣೆ, ಕಟ್ಟಡದ ಮೇಲುಸ್ತುವಾರಿ, ಚುನಾವಣಾ ಕಾರ್ಯ, ಜಾತಿ ಗಣತಿಯಂಥ ಕಾರ್ಯಗಳಿಂದಾಗಿ ದೈಹಿಕ, ಮಾನಸಿಕವಾಗಿ ಕುಗ್ಗುತ್ತಿದ್ದರೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಪಠ್ಯೇತರ ಚಟುವಟಿಕೆಗಳಿಗೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಬೇಕು. ನಿರುದ್ಯೋಗಿ ಪದವೀಧರರನ್ನು ಬಳಸಿಕೊಳ್ಳಬೇಕು. ಅದಮ್ಯ ಚೇತನ, ಇಸ್ಕಾನ್ ಸಂಸ್ಥೆ ಅಥವಾ ಮೂರನೇ ವ್ಯಕ್ತಿ ಏಜೆನ್ಸಿ ಮೂಲಕ ಸರಬರಾಜು, ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ೯ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ವಿಸ್ತರಿಸಿರುವುದು ಸ್ವಾಗತಾರ್ಹ. ಕಲ್ಯಾಣ ಕರ್ನಾಟಕದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಕೊರತೆ ಆಗಬಾರದು. ಇದಕ್ಕಾಗಿ ನಿಯಮಾನುಸಾರ ಮೊಟ್ಟೆ, ಚಕ್ಕಿ, ಬಾಳೆ ಹಣ್ಣು ಇತರ ಆಹಾರ ವಿತರಣೆ ಮುಂದುವರಿಸುವAತೆ ಒತ್ತಾಯಿಸಿದರು.
ಕಾಡಾ ಮಾಜಿ ಅಧ್ಯP್ಷÀ ಹರ್ಷವರ್ಧನ ಗುಗ್ಗಳೆ, ಪ್ರಮುಖರಾದ ಮುರುಗೇಂದ್ರ ವೀರಶೆಟ್ಟಿ, ಮಲ್ಲಿಕಾರ್ಜುನ ಧುತ್ತರಗಾಂವ್, ಬಾಬುರಾವ್ ಹಾಗರಗುಂಡಗಿ, ನಾಗರಾಜ ಸಣ್ಣೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net