ಪಠ್ಯೇತರ ಚಟುವಟಿಕೆಗಳು ಪ್ರತಿಭೆ ಅನಾವರಣಕ್ಕೆ ಪೂರಕ

525d2803-51d6-4db5-8c3d-fb4c7d383e47--06
Published on

ಚಿತ್ರದುರ್ಗ: ವಿದ್ಯಾರ್ಥಿಯ ವಿಕಾಸನಕ್ಕೆ ಪಠ್ಯದ ಜತೆ, ಪಠ್ಯೇತರ ಚಟುವಟಿಕೆಗಳು ಕೂಡ ಪೂರಕವಾಗಿವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್.ಪುಟ್ಟಸ್ವಾಮಿ ಹೇಳಿದರು.
ಶಾಲಾ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಇಲಾಖೆಗಳು, ಕರ್ನಾಟಕ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಸಂಯುಕ್ತಾಶ್ರಯದಲ್ಲಿ ನಗರದ ಎಸ್‌ಆರ್ ಎಸ್ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಬೆಂಗಳೂರು ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿ ಗಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಇಂಥ ಕಾರ‌್ಯಕ್ರಮಗಳು ಸಹಕಾರಿಯಾಗಿವೆ. ಸೋಲು-ಗೆಲುವು ಎನ್ನುವುದಕ್ಕಿಂತ ಸ್ಪರ್ಧೆಯಲ್ಲಿ ಭಾಗವಹಿಸು ವುದು ಮುಖ್ಯ. ಏಕೆಂದರೆ ಬದುಕಿನಲ್ಲಿ ಬರುವಂಥ ಕಷ್ಟ, ಸುಖಗಳನ್ನು ಸಮಾನಾಗಿ ಸ್ವೀಕರಿಸುವಂಥ ಆತ್ಮವಿಶ್ವಾಸವನ್ನು ಇಂಥ ವೇದಿಕೆಗಳು ಒದಗಿಸುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ ಮಾತನಾಡಿ, ಸಾಂಸ್ಕೃತಿಕ ಕಾರ‌್ಯಕ್ರಮಗಳು ವಿದ್ಯಾ ರ್ಥಿಗಳಿಗೆ ಸಂಸ್ಕಾರವನ್ನು ಕಲಿಸಲು ನೆರವಾಗುತ್ತವೆ. ಇಂಥ ಸ್ಪರ್ಧೆಗಳಲ್ಲಿ ಮಕ್ಕಳಿಗೆ ಪ್ರೋತ್ಸಾಹದೊಂದಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವೂ ಇದೆ. ಪದವಿ ಪೂರ್ವ ಶಿಕ್ಷಣ ಎಂಬುದು, ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ನಿರ್ಣಾಯಕ ಹಂತವಾಗಿದೆ ಎಂದರು.
ಪಿಯು ನಿವೃತ್ತ ಉಪ ನಿರ್ದೇಶಕ ಕೆ.ವೀರಭದ್ರಪ್ಪ, ಸಂಗೀತ ವಿದ್ವಾನ್ ದ್ವಾರಕೇಶ್, ಪ್ರಾಚಾರ‌್ಯ ಕೆ.ನಾಗಣ್ಣ, ನಿವೃತ್ತ ಪ್ರಾಂಶುಪಾಲ ಜಂಬುನಾಥ್,ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಲ್.ರಂಗಪ್ಪ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್ ಮಲ್ಲೇಶ್, ಜಿ.ಎಸ್.ತಿಪ್ಪೇಸ್ವಾಮಿ,ಕೆ.ನಾಗರಾ ಜ್,ಎಂ.ರವೀಶ್, ಎ.ಕಾಂತರಾಜ್, ಗಂಗಾಧರ್, ಜಬಿವುಲ್ಲಾ, ಕೆ.ಎಚ್.ರಾಜು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net