ಪಠ್ಯೇತರ ಚಟುವಟಿಕೆಗಳಿಗೆ ಮೊದಲ ಆದ್ಯತೆ

10npn1
Published on

ನಿಪ್ಪಾಣಿ: ವಿಎಸ್‌ಎಂ ಸಿಬಿಎಸ್‌ಇ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ, ವಿದ್ಯಾರ್ಥಿಗಳು ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆಗೈಯುತ್ತಿದ್ದಾರೆ ಎಂದು ವಿದ್ಯಾ ಸಂವರ್ಧಕ ಮಂಡಳದ ಚೇರ್ಮನ್ ಚಂದ್ರಕಾಂತ ಕೋಠಿವಾಲೆ ಹೇಳಿದರು.

ಸ್ಥಳೀಯ ವಿಎಸ್‌ಎಂ ಸಿಬಿಎಸ್‌ಇ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಡಿಭಾಗದಲ್ಲಿ ಕನ್ನಡ, ಮರಾಠಿ ಹಾಗೂ ಆಂಗ್ಲ ಭಾಷೆಯಲ್ಲೂ ಬೋಧಿಸುವ ಏಕೈಕ ಶೈಕ್ಷಣಿಕ ಸಂಸ್ಥೆ ನಮ್ಮದಾಗಿದೆ. ಸಿಬಿಎಸ್‌ಇ ಶಾಲೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳದಿಂದ ಎಲ್ಲ ವರ್ಗಗಳಿಗೆ ಮತ್ತೊಂದು ವಿಭಾಗ ಆರಂಭಿಸಲಾಗುವುದು. ಸುಸಜ್ಜಿತ ಕಟ್ಟಡ ಜತೆಗೆ ಗುಣಮಟ್ಟದ ಕಲಿಕೆಗೆ ಯೋಜನೆ ಜಾರಿಗೊಳಿಸಲಾಗುವುದು ಎಂದರು.

ಚಿಕ್ಕೋಡಿ ಸಿಟಿಇ ಸಂಸ್ಥೆಯ ಸಹ ಕಾರ್ಯದರ್ಶಿ ಡಾ.ಮಿಥುನ್ ದೇಶಪಾಂಡೆ, ಸಿಇಒ ಡಾ.ಸಿದ್ಧಗೌಡ ಪಾಟೀಲ ಮಾತನಾಡಿದರು.

ಸಂಸ್ಕೃತಿ ಪಾಟೀಲ ಮತ್ತು ಆಫ್ರೀದಿ ಮಕಾನದಾರ ಜನರಲ್ ಚಾಂಪಿಯನ್‌ಶಿಪ್, ರಿತಿಕಾ ಪಾಸವಾನ ಉತ್ತಮ ಬಾಲಕಿ, ಆಸೀಮ್ ದಾಡಿವಾಲೆ ಉತ್ತಮ ಬಾಲಕ ಹಾಗೂ ಸ್ನೇಹಾ ಹನುಮಸಾಗರ ಮತ್ತು ಆದರ್ಶ ಶೇಳಕೆ ಅವರನ್ನೊಳಗೊಂಡ ಯಲ್ಲೋವ್ ಹೌಸ್ ಬೆಸ್ಟ್ ಹೌಸ್ ಪ್ರಶಸ್ತಿ ಪಡೆಯಿತು. ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಮಂಡಳದ ವೈಸ್ ಚೇರ್ಮನ್ ಪಪ್ಪು ಪಾಟೀಲ, ಕಾರ್ಯದರ್ಶಿ ಸಮೀರ ಬಾಗೇವಾಡಿ, ಉಪಾಧ್ಯಕ್ಷ ರಜತ ಢೋಲೆ, ಸಂಚಾಲಕ ಭರತ ಕುರಬೆಟ್ಟಿ, ಸಂಜಯ ಮೊಳವಾಡೆ, ರಾವಸಾಹೇಬ ಪಾಟೀಲ, ಆನಂದ ಗಿಂಡೆ, ಸಚಿನ್ ಹಾಲಪ್ಪನವರ, ಪ್ರವೀಣ ಪಾಟೀಲ, ಅನಿಲ ನೇಷ್ಠಿ, ಪ್ರಲ್ಹಾದ ನರಕೆ ಇತರರಿದ್ದರು. ಪ್ರಾಚಾರ್ಯೆ ಡಾ.ಸಮಿರಾ ಬಾಗೇವಾಡಿ ವಾರ್ಷಿಕ ವರದಿ ವಾಚಿಸಿದರು. ಉಪಪ್ರಾಚಾರ್ಯ ವಿಜಯ ಮಗದುಮ ಪರಿಚಯಿಸಿದರು. ಅಭಿಶ್ರೀ ಭಾರಮಲ ನಿರೂಪಿಸಿದರು. ಐಶ್ವರ್ಯ ಹೂಗಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net