ಪಠ್ಯೇತರ ಚಟುವಟಿಕೆ ಮಕ್ಕಳಿಗೆ ಸಹಾಯಕ

5Manjari1
Published on

ಮಾಂಜರಿ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪತ್ಯೇತರ ಚಟುವಟಿಕೆಗಳು ಸಹಕಾರಿ ಎಂದು ಸಿಪಿಐ ವಿಶ್ವನಾಥ ಚೌಗುಲಾ ಹೇಳಿದರು.

ಸಮೀಪದ ಶುರುಗುಪ್ಪಿ ಗ್ರಾಮದ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಪದವಿ ಮತ್ತು ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಶಾಲಾ ಸಂಸತ್‌ಗೆ ನೂತನ ಆಯ್ಕೆಯಾದ ಸದಸ್ಯರ ಪ್ರಮಾಣ ವಚನ ಸಮಾರಂಭದಲ್ಲಿ ಮಾತನಾಡಿ, ಮಕ್ಕಳು ಮೊಬೈಲ್‌ಗೆ ಬಲಿಯಾಗದಂತೆ ಪಾಲಕರು ಎಚ್ಚರ ವಹಿಸಬೇಕು. ಶಾಲೆಯ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಲ್ಲುತ್ತೇನೆ. ಶಾಲೆ ಇನ್ನೂ ಎತ್ತರಕ್ಕೇರಲಿ ಎಂದು ಹಾರೈಸಿದರು.

ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕೆಎಲ್‌ಇ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಕಾರ್ಯದರ್ಶಿ ಡಾ. ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ಪ್ರಖ್ಯಾತಿ ಪಡೆದಿದೆ. ವಿದ್ಯಾರ್ಥಿಗಳು ಏಕಾಗ್ರತೆ ಮೈಗೂಡಿಸಿಕೊಂಡು ಶ್ರದ್ಧೆಯಿಂದ ಅಧ್ಯಯನ ಮಾಡಿ ಜ್ಯ್ನಾನ ಗಳಿಸಬೇಕು ಎಂದರು. ಶಿವಾನಂದ ಪಾಟೀಲ ಮಾತನಾಡಿದರು. ಈರಗೌಡ ಪಾಟೀಲ, ಎಸ್.ಬಿ.ಪಾಟೀಲ, ವಿಶ್ವನಾಥ ಚೌಗುಲಾ ಇತರರಿದ್ದರು. ಆರ್.ಡಿ.ಪವಾರ ಮತ್ತು ವೈಷ್ಣವಿ ಚೌಗುಲೆ ನಿರೂಪಿಸಿದರು. ಶ್ರಾವಣಿ ಕುಲಕರ್ಣಿ ಪ್ರಾರ್ಥಿಸಿದರು. ಪ್ರೊ.ಪಿ.ಎಸ್.ರತ್ತು ಸ್ವಾಗತಿಸಿದರು. ಪ್ರೊ.ಕೆ.ಎಂ.ಮಾಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net