ಪಠ್ಯದಷ್ಟೇ ಕ್ರೀಡೆಗೂ ಮಹತ್ವ

ydg10
ಯಾದಗಿರಿ ಹೊರ ವಲಯದ ಹೊಸಳ್ಳಿ ಸಮೀಪದಲ್ಲಿ ಆರಂಭಗೊAಡಿರುವ ಎನ್‌ಎಸಿ ಸ್ಪೋರ್ಟ್ಸ್ ಅಕಾಡೆಮಿಯನ್ನು ಜಿ¯್ಲÁ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಶನಿವಾರ ಉದ್ಘಾಟಿಸಿದರು. ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ ಇತರರಿದ್ದರು,
Published on

ಯಾದಗಿರಿ: ಪಠ್ಯದಷ್ಟೇ ಕ್ರೀಡೆಗೂ ಮಹತ್ವವಿದೆ. ಹೀಗಾಗಿ ಪ್ರತಿಯೊಬ್ಬರು ಒಂದಿಲ್ಲೊAದು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಶನಿವಾರ ನಗರದ ಹೊರ ವಲಯದ ಹೊಸಳ್ಳಿ ಸಮೀಪ ನೂತನವಾಗಿ ಆರಂಭಿಸಲಾಗದ ಎನ್‌ಎಸಿ ಸ್ಪೋರ್ಟ್ಸ್ ಅಕಾಡೆಮಿ ಉದ್ಘಾಟಿಸಿ ಮಾತನಾಡಿ, ಆಧುನಿಕತೆ ಜೀವನ ಶೈಲಿಗೆ ಮಾರು ಹೋಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇದರಿಂದ ಸಣ್ಣ ವಯಸ್ಸಿನಲ್ಲಿ ಮಾರಕ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಿತ್ಯ ಎಷ್ಟೇ ಒತ್ತಡವಿದ್ದರೂ ದಿನದ ಒಂದು ಗಂಟೆಯಾದರೂ ಆಟೋಟಗಳಿಗೆ ಸಮಯ ಮೀಸಲಿಡುವ ಅಗತ್ಯವಿದೆ. ಸಧೃಡ ದೇಹ ಹೊಂದಿದ ವ್ಯಕ್ತಿಯ ಆಲೋಚನೆಗಳು ಸಹ ಗಟ್ಟಿಯಾಗುತ್ತವೆ. ಕಾರಣ, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮಾಡಬೇಕು ಎಂದರು.
ಯುವ ಜನಾಂಗ ದುಶ್ಚಟಗಳಿಗೆ ದಾಸರಾಗುತ್ತಿರುವುದು ವಿಷಾದಕರ ಸಂಗತಿ. ಹಿಂದೆ ಗ್ರಾಮೀಣ ಭಾಗದÀ ಜನ ಕ್ವಿಂಟಾಲï ಜೋಳದ ಚೀಲ ಎತ್ತಿಕೊಂಡು ಹೋಗುತ್ತಿದ್ದರು. ಆದರೆ, ಈಗಿನ ಯುವಕರಿಗೆ 10 ಕೆಜಿ ಭಾರ ಹೊರುವುದು ಆಗುತ್ತಿಲ್ಲ. ನೂತನ ಸ್ಪೋರ್ಟ್ಸ್ ಆಕಾಡೆಮಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ ಎಂದು ಹೇಳಿದರು.

ಅಕಾಡೆಮಿ ಮುಖ್ಯಸ್ಥರಾದ ಲೀಲಾ ಕೃಷ್ಣರಾವ ಪ್ರಾಸ್ತಾವಿಕ ಮಾತನಾಡಿದರು. ಶಾಸಕರಾದ ಚನ್ನಾರಡ್ಡಿ ಪಾಟೀಲï ತುನ್ನೂರ, ಶರಣಗೌಡ ಕಂದಕೂರ ಮಾತನಾಡಿದರು. ಪ್ರಮುಖರಾದ ರಾಚನಗೌಡ ಮುದ್ನಾಳ, ಭೀಮನಗೌಡ ಕ್ಯಾತನಾಳ, ಚೈತನ್ಯ ಕೃಷ್ಣ, ಪ್ರಸಾದ, ಪೂರ್ಣಬಾಬು ಇದ್ದರು. ಡಾ.ಸಿದ್ದರಾಜ ರಡ್ಡಿ ಸ್ವಾಗತಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net