ಪಠ್ಯದ ಜತೆಗೆ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ

PH 11
Published on

ಖಜೂರಿ: ಪ್ರತಿ ವಿದ್ಯಾರ್ಥಿಯೂ ಪಠ್ಯದ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಮನಸ್ಸು ವಿಕಾಸಗೊಳ್ಳುತ್ತದೆ ಎಂದು ಖಜೂರಿ ಕೋರಣೇಶ್ವರ ಮಠದ ಶ್ರೀ ಮರುಘೇಂದ್ರ ಕೋರಣೇಶ್ವರ ಸ್ವಾಮೀಜಿ ನುಡಿದರು.

ನಿಜಾಚರಣೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕ್ರೀಡೆಗಳಿಂದ ಸದೃಢ ದೇಹ ಹೊಂದಲು ಸಾಧ್ಯ. ಆಟಗಳಲ್ಲಿ ಸೋಲು- ಗೆಲುವು ಸಾಮಾನ್ಯ. ಹೀಗಾಗಿ ಮಕ್ಕಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಮುಂದೆ ಸಾಗಬೇಕು ಎಂದು ಹೇಳಿದರು.

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಾಲೆಯ ವಿದ್ಯಾರ್ಥಿಗಳಾದ ರಾಮಚಂದ್ರ ಸುತಾರ್, ಯುವರಾಜ ಗಿರೀಶ್ (ಖೋಖೋ), ಸುಮೀತ್ ರೇವಣಪ್ಪ (ಎತ್ತರ ಜಿಗಿತ)ನನ್ನು ಸನ್ಮಾನಿಸಿ, ಪ್ರೋತ್ಸಾಹಿಸಲಾಯಿತು.

ಮುಖ್ಯಗುರು ಸುಭಾಷ ಹರಳಯ್ಯ, ಶಿಕ್ಷಕರಾದ ರಾಜು ಕಲಶೆಟ್ಟಿ, ವಿಜಯ ಪೂಜಾರ, ಶರಣ ಶಿವಮೂರ್ತಿ, ಜ್ಯೋತಿ ಕಟಕೆ, ವೈಜನಾಥ ಬಂಗರಗೆ, ಬಸವರಾಜ ಧಗೆ, ಶಿವಶರಣ, ಶ್ರೀಮಂತ ಸುಲ್ತಾನಪುರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net