

ಚಿತ್ರದುರ್ಗ:ನಗರದ ಎಸ್‌ಜೆಎಂ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗದಿಂದ ‘ಉದಯೋನ್ಮುಖ ಮಾಹಿತಿ ತಂತ್ರ ಜ್ಞಾನ ಉದ್ಯಮದ ಪ್ರವೃತ್ತಿಗಳು’ಕುರಿತ ಒಂದು ದಿನದ ಕಾರ‌್ಯಾಗಾರವನ್ನು ಶುಕ್ರವಾರ ಏರ್ಪಡಿಸಲಾಗಿತ್ತು. ಅಧ್ಯಕ್ಷತೆ ವಹಿಸಿದ್ದ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೆ.ಆರ್.ಕೃಷ್ಣರೆಡ್ಡಿ ಮಾತನಾಡಿ,ವಿದ್ಯಾರ್ಥಿಗಳ ಇಂದಿನ ಪಠ್ಯಕ್ಕೂ,ಮಾಹಿತಿ ತಂತ್ರಜ್ಞಾನ ಉದ್ಯಮದ ಪ್ರಸ್ತುತ ಬೇಡಿ ಕೆ ನಡುವೆ ವ್ಯಾಪಕ ಅಂತರವಿದ್ದು,ಈ ಅಂತರ ಭರ್ತಿಗೆ ಇಂಥ ಕಾರ‌್ಯಾಗಾರಗಳು ನೆರವಾಗಲಿವೆ ಎಂದರು. ಪ್ರೊ.ಬಿ.ಇ.ರಮೇಶ್,ಸಿಮನ್ಸ್ ಕಂ ಪನಿ ಪ್ರಾಜೆಕ್ಟ್ ಟೀಮ್‌ಲೀಡರ್ ಎಂ.ಮಹೇಶ್ ಮಾತನಾಡಿದರು. ಪ್ರೋ.ಬಸಂತಕುಮಾರಿ,ಪ್ರೋ.ಎಂ.ಕೆ.ಶೃತಿ,ಪ್ರೋ.ಬೀನಾಶೇರಿಲ್ ಇದ್ದ ರು. ವಿದ್ಯಾ ಸ್ವಾಗತಿಸಿ,ಪರಿಮಳಾ ವಂದಿಸಿದರು. ಸಿಂಧೂರಿ ಪ್ರಾರ್ಥಿಸಿ,ರುಚಿತಾ ನಿರೂಪಿಸಿದರು. ಶ್ರೇಯಾ ಸಂಪನ್ಮೂಲ ವ್ಯಕ್ತಿ ಪರಿಚಯ ನಡೆಸಿ ಕೊಟ್ಟರು.
----