

ಹುಮನಾಬಾದ್: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಲವು ದಶಕ ಪತ್ರಿಕೆ ವಿತರಕರಾಗಿ ಸೇವೆ ಸಲ್ಲಿಸಿರುವ ಮಾಣಿಕರಾವ ಭಂಡಾರಿ ಸೇರಿ ಬೀದರ್ ಜಿಲ್ಲಾ ಸ್ವತಂತ್ರ ಹೋರಾಟಗಾರ ಚರಿತ್ರೆ ಪಠ್ಯ ಪುಸ್ತಕದಲ್ಲಿ ಅಳವಡಿಸುವ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ತಾಲೂಕು ಅಧ್ಯಕ್ಷ ವೀರಂತರೆಡ್ಡಿ ಜಂಪಾ ಹೇಳಿದರು.
ಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ಸ್ವಾತಂತ್ರ್ಯಹೋರಾಟಗಾರ, ಪತ್ರಿಕಾ ವಿತರಕ ಮಾಣಿಕರಾವ ಭಂಡಾರಿ ಅವರ ೨೫ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ ವಿಮೋಚನೆಗಾಗಿ ಹೋರಾಡಿ ರಜಾಕಾರರ ಸಿಂಹಸ್ವಪ್ನವಾಗಿದ್ದ ಭಂಡಾರಿ ಯುವ ಪೀಳಿಗೆಗೆ ಮಾದರಿಯಾಗಿದ್ದರು ಎಂಬುದು ಇತಿಹಾಸ ಪುಟದಿಂದ ತಿಳಿದು ಬರುತ್ತದೆ. ಅವರು ಹೋರಾಡಿ ಜೈಲುವಾಸ ಅನುಭವಿಸಿದ ವಿಸ್ತೃತ ಮಾಹಿತಿಯನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಿದಾಗಲೇ ಮುಂದಿನ ಜನಾಂಗಕ್ಕೆ ವಾಸ್ತವ ತಿಳಿಯಲಿದೆ ಎಂದರು.
ಶ್ರೀ ಶರಣಯ್ಯ ಸ್ವಾಮಿ ನಿಂಬೂರಮಠ ಸಾನ್ನಿಧ್ಯ ವಹಿಸಿದ್ದರು. ಆರ್ಯ ಸಮಾಜದ ಮುಖಂಡ ಸುಭಾಷ ಅಷ್ಟಿಕರ್, ಸಾಹಿತಿಗಳಾದ ಎಚ್. ಕಾಶೀನಾಥರೆಡ್ಡಿ, ರೇವಣಸಿದ್ದಯ್ಯ ಮಾತನಾಡಿದರು.
ಪ್ರಮುಖರಾದ ಪಂಡಿತ ಬಾಳೂರೆ, ಸುರೇಂದ್ರನಾಥ ಹುಡುಗಿಕರ್, ರಾಜಕುಮಾರ ಭೂರೇಶ, ಸುರೇಶ ಮುಸ್ತರಗಿ, ಅರವಿಂದ ಜೋಗರೆ, ಮನೋಜ ಸಿತಾಳೆ, ಕೆ.ವೀರಾರೆಡ್ಡಿ, ಕೆ.ಪ್ರಭಾಕರ, ಪರಮೇಶ್ವರ ಸೂರ್ಯವಂಶಿ, ವೀರಯ್ಯ ಸ್ವಾಮಿ, ಅಶೋಕ ಮಠಪತಿ, ಕಾರ್ತಿಕ ಸ್ವಾಮಿ, ಬಾಬುರಾವ್ ಕಾಳೆ, ನಾಗರಾಜ ಹಿಬಾರೆ, ಉದಯಕುಮಾರ ವಾರದ್, ಭಗವಾನರಾವ್ ಕಾಳೆ, ಶಿವರಾಜ ಮೇತ್ರೆ, ವಿಜಯಕುಮಾರ ಚೆಟ್ಟಿ, ರಾಜು ಭಂಡಾರಿ, ನಾಗಮ್ಮ ಭಂಡಾರಿ, ಗೀತಾ ಭಂಡಾರಿ, ಶ್ರಾವಣಿ, ಸಂಸ್ಕೃತ ಭಂಡಾರಿ ಉಪಸ್ಥಿತರಿದ್ದರು.
ಮನೋಹರರಾವ ಭಂಡಾರಿ ವಂದಿಸಿದರು. ಗಿರೀಶ್ ನಿರೂಪಣೆ ಮಾಡಿದರು. ಕಲಾವಿದ ಜಗನ್ನಾಥ ಬೇಂದ್ರೆ ವಚನ ಗಾಯನ ನಡೆಸಿಕೊಟ್ಟರು. ಕಸಾಪ ಮಾಜಿ ತಾಲೂಕು ಅಧ್ಯಕ್ಷ ರವಿ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು. ಪತ್ರಿಕಾ ವಿತರಿಕರನ್ನು ಸನ್ಮಾನಿಸಲಾಯಿತು.