ಪಠಾಣ್ ಚಿತ್ರ ಬಹಿಷ್ಕಾರ ಅಭಿಯಾನಕ್ಕೆ ಮುತಾಲಿಕ್ ಬೆಂಬಲ

Pramod Mutalik
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಾರುಖ್‌ಖಾನ್ ನಟನೆಯ ‘ಪಠಾಣ್’ ಹಿಂದಿ ಚಿತ್ರಕ್ಕೆ ಬಹಿಷ್ಕಾರದ ಅಭಿಯಾನ ಆರಂಭವಾಗಿದೆ. ಈ ಅಭಿಯಾನವನ್ನು ಶ್ರೀರಾಮ ಸೇನೆ ಬೆಂಬಲಿಸುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚಿತ್ರದ ‘ಬೇಶರಮ್ ರಂಗ್’ ಹಾಡಿನಲ್ಲಿ ಕೇಸರಿ ಬಣ್ಣದ ಬಟ್ಟೆ ಇದೆ. ಕೇಸರಿ ಬಣ್ಣ ಹಿಂದುಗಳದ್ದು. ಅಶ್ಲೀಲ, ಅಸಭ್ಯ ಬಟ್ಟೆ ಹಾಕಿದ ಹಾಡಿನಲ್ಲಿ ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಿದ್ದಾರೆ ಎಂದರು.
ಹಿಂದಿ ಚಿತ್ರರಂಗ ಹಿಂದುಗಳು ಮತ್ತು ಹಿಂದು ದೇವರ ಅವಹೇಳನ ಮಾಡುತ್ತ ಬಂದಿದೆ. ಹಿಂದು ಸ್ವಾಮೀಜಿ, ಧರ್ಮ ಗ್ರಂಥಗಳ ಅವಹೇಳನ ಹಿಂದಿನಿಂದ ನಡೆದುಬಂದಿದೆ. ಇದರ ಹಿಂದೆ ಮುಸ್ಲೀಂ ಲಾಬಿ ಇದೆ. ಹಿಂದುಗಳನ್ನು ಗೂಂಡಾಗಳನ್ನಾಗಿ ತೋರಿಸಿ, ಮುಸ್ಲೀಮರಿಗೆ ಒಳ್ಳೆಯ ಪಾತ್ರ ಕೊಡುತ್ತಾರೆ. ಪಿಕೆ ಚಿತ್ರದಲ್ಲಿ ಪಾಕಿಸ್ತಾನಿ ವ್ಯಕ್ತಿ ಹಿಂದು ಹುಡುಗಿಯ ಪ್ರೀತಿಯ ವಿಷಯ ಇತ್ತು. ಶಾರುಖ್‌ಖಾನ್, ಅಮೀರ್‌ಖಾನ್ ದೇಶದ್ರೋಹಿಗಳು. ಅವರು ಹಿಂದುಗಳಿಂದಲೇ ಹೀರೋಗಳಾಗಿದ್ದಾರೆ. ಪಠಾಣ್ ಸಿನಿಮಾ ಬಹಿಷ್ಕಾರ ಹಾಕಬೇಕು. ಈ ಬಗ್ಗೆ ಚಿತ್ರ ಪ್ರದರ್ಶನ ಮಾಡುವವರಿಗೂ ನಾವು ಮನವಿ ಮಾಡುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net