ಪಟ್ರಮೆಯಲ್ಲಿ ಧೂಪದ ಮರ ಮೈಮೇಲೆ ಬಿದ್ದು 3 ಜನ ಯುವಕರ ದಾರುಣ ಸಾವು

Published on

ಪುತ್ತೂರು: ಮರಕಡಿಯುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಮರದಡಿಗೆ ಬಿದ್ದು ಮೂವರು ಯುವಕರು ಧಾರುಣವಾಗಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಅನಾರು ಸಮೀಪ ಕಾಯಿಲ ಎಂಬಲ್ಲಿ ಸಂಭವಿಸಿದೆ.

ಪಟ್ರಮೆ ಗ್ರಾಮದ ರಾಮಣ್ಣ ಕುಂಬಾರ ಎಂಬವರ ಪುತ್ರ ಪ್ರಶಾಂತ್(21), ಸೇಸಪ್ಪ ಪೂಜಾರಿಯವರ ಮಗ ಸ್ವಸ್ತಿಕ್ (ಮತ್ತು ಇನ್ನೋರ್ವ ಕನ್ಯಾಡಿ ಮೂಲದ ಯುವಕ ಕೂಡಾ ಮೃತಪಟ್ಟಿದ್ದಾರೆ.

ದೂಪದ ಮರವೊಂದನ್ನು ಕಡಿದುರುಳಿಸುವ ಸಂದರ್ಭ ಮರದ ಅಡಿಗೆ ಸಿಲುಕಿದ ಯುವಕರು ಮೃತಪಟ್ಟಿದ್ದಾರೆ. ಅನಾರು ಕಾಯಿಲ ಲೋಕಯ್ಯ ಗೌಡರಿಗೆ ಸೇರಿದ ಜಾಗದಲ್ಲಿದ್ದ ಧೂಪದ ಮರವನ್ನು ಕಡಿದು ಉರುಳಿಸಲು ಈ ಯುವಕರು ಬಂದಿದ್ದರು. ಆ ವೇಳೆ ಆಕಸ್ಮತ್ತಾಗಿ ಉರುಳಿದ ಮರ ಯುವಕರ ಮೇಲೆ ಬಿದ್ದಿದೆ. ಈ ಸಂಬಂಧ ಧರ್ಮಸ್ಥಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net